For Quick Alerts
  ALLOW NOTIFICATIONS  
  For Daily Alerts

  ಜ.18ರಂದು ತೆನೆ ಹೊರಲಿರುವ ತಾರೆ ಪೂಜಾಗಾಂಧಿ

  By Rajendra
  |

  ಕನ್ನಡ ಸಿನಿಮಾ ತಾರೆ ಪೂಜಾಗಾಂಧಿ ಜೆಡಿಎಸ್ ಪಕ್ಷ ಸೇರಲಿರುವ ಸುದ್ದಿ ಗೊತ್ತೇ ಇದೆ. ಆದರೆ ಅವರು ಯಾವಾಗ ದೇವೇಗೌಡರ ಪಕ್ಷ ಸೇರುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇದೀಗ ತಾನೆ ಹೊರಬಿದ್ದಿದೆ. ಜ.18ರಂದು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

  ಜೆಡಿಎಸ್ ಕಚೇರಿಯಲ್ಲಿ ಅಂದು ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು, ಪೂಜಾಗಾಂಧಿಯನ್ನು ತಮ್ಮ ಪಕ್ಷಕ್ಕೆ ಸ್ವತಃ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬರಮಾಡಿಕೊಳ್ಳಲಿದ್ದಾರೆ.

  ಜನವರಿ 12ರಂದು ಪೂಜಾಗಾಂಧಿ ಜೆಡಿಎಸ್‌ ಕಚೇರಿಗೆ ಭೇಟಿ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೆಡ್ಡಿ ಅವರೊಂದಿಗೆ ಪೂಜಾ ಆಗಮಿಸಿದ್ದರು. ಆದರೆ ಅಂದು ಅವರು ರಾಜಕೀಯ ರಂಗ ಪ್ರವೇಶದ ಬಗ್ಗೆ ತುಟಿ ಬಿಚ್ಚಿರಲಿಲ್ಲ. (ಏಜೆನ್ಸೀಸ್)

  English summary
  Kannada actress Pooja Gandhi has all set to joining JDS on January 18. A function has also been organised in the Race course Road office of the party on Wednesday

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X