»   »  ಶ್ರೀಮತಿಗೆ ಉಪೇಂದ್ರ ವ್ಯಾಲೆಂಟೈನ್ ಉಡುಗೊರೆ

ಶ್ರೀಮತಿಗೆ ಉಪೇಂದ್ರ ವ್ಯಾಲೆಂಟೈನ್ ಉಡುಗೊರೆ

Subscribe to Filmibeat Kannada
ಉಪೇಂದ್ರ ತಮ್ಮ ಹೆಂಡತಿಗೆ ವಿಶೇಷ ವ್ಯಾಲೆಂಟೈನ್ ಉಡುಗೊರೆ ನೀಡಿದ್ದಾರೆ. ತೆಲುಗಿನ ನಿರ್ಮಾಪಕರು ಹೇಳಿದ ಕಥೆ ಕೇಳಿ ಥ್ರಿಲ್ ಆಗಿ, ಹೆಂಡತಿಯೇ ಅದರಲ್ಲಿ ನಟಿಸಲು ಸೂಕ್ತ ಅಂತ ನಿರ್ಧರಿಸಿದ್ದಾರೆ. ಸಿನಿಮಾ ಹೆಸರು ಶ್ರೀಮತಿ. ನಿರ್ದೇಶಕರು ಸಂಪತ್ ನಂದಿ.

ಮಲ್ಲ ಚಿತ್ರದಲ್ಲಿ ರವಿಚಂದ್ರನ್ ಜೊತೆ ಅಧರ ಚುಂಬನದ ದೃಶ್ಯಗಳಲ್ಲಿ ಕಾಣಿಸಿಕೊಂಡು ಮೈಬೆಚ್ಚಗೆ ಮಾಡಿದ್ದ ಪ್ರಿಯಾಂಕ ಸಿನಿಮೀಯ ರೀತಿಯಲ್ಲಿ ಉಪೇಂದ್ರ ಅವರನ್ನು ಮದುವೆಯಾಗಿದ್ದರು. ಆಮೇಲೆ ಬಣ್ಣ ಹಚ್ಚುವುದನ್ನು ತಾತ್ಕಾಲಿಕವಾಗಿ ಬಿಟ್ಟಿದ್ದರು. ನಡುವೆ ಮೊದಲೇ ಒಪ್ಪಿಕೊಂಡಿದ್ದ ಬಂಗಾಲಿ ಸಿನಿಮಾವೊಂದನ್ನು ಮಾತ್ರ ಮುಗಿಸಿಕೊಟ್ಟು ಬಂದಿದ್ದರು.

ಎರಡು ಮಕ್ಕಳ ಲಾಲನೆ ಪಾಲನೆ, ಆಮೇಲೆ ರೆಸಾರ್ಟ್ ಕಾಮಗಾರಿಯ ಮೇಲ್ವಿಚಾರಣೆ ಎಲ್ಲವುಗಳಲ್ಲಿ ಕಳೆದುಹೋಗಿದ್ದ ಪ್ರಿಯಾಂಕ ಆಗೀಗ ಗಂಡನ ಜೊತೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಹೆಂಡತಿ ನಟಿಸಕೂಡದು ಎಂಬ ಮಡಿವಂತಿಕೆಯೇನೂ ಉಪೇಂದ್ರ ಅವರಿಗೆ ಇಲ್ಲ. ನಟಿಸುವುದು ಒಳ್ಳೆಯದು ಅನ್ನೋದೇ ಅವರ ನಂಬಿಕೆ. ಪ್ರಿಯಾಂಕ ಬೊಜ್ಜು ಬಾರದಂತೆ ನಿಗಾ ವಹಿಸಿದ್ದಾರೆ.

ಒಂದು ವೇಳೆ ಶ್ರೀಮತಿ ಯಶಸ್ವಿಯಾದರೆ ಪ್ರಿಯಾಂಕ ಮತ್ತಷ್ಟು ಅವಕಾಶಗಳನ್ನು ಒಪ್ಪಿಕೊಳ್ಳುತ್ತಾರಾ? ಈ ಚಿತ್ರದಲ್ಲೇನೋ ಪತಿದೇವರು ಕೂಡ ಅವರೊಟ್ಟಿಗೆ ನಟಿಸುತ್ತಿದ್ದಾರೆ. ಬೇರೆ ನಟರ ಜೊತೆ ಅವರು ಡ್ಯುಯೆಟ್‌ಗೆ ಸಿದ್ಧವಾಗಿದ್ದಾರಾ? ಈಗಲೇ ಏನೂ ಹೇಳಲಾಗದು ಅಂತ ಪ್ರಿಯಾಂಕ ತಲೆಯಾಡಿಸಿದ್ದಾರೆ. ಇದರ ಹಿಂದೆಯೇ ಉಪೇಂದ್ರ ಅವರ ರಜನಿ ಮತ್ತು ಲಂಡನ್ ಗೌಡ ಚಿತ್ರಗಳೂ ಆರಂಭವಾಗಲಿವೆ. ದುಬೈ ಬಾಬು ಬಿಡುಗಡೆಗೆ ಸಿದ್ಧವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ಮರಸುತ್ತೊ ಪ್ರೇಮಿಗಳಾಗಿ ಉಪ್ಪಿ, ಪ್ರಿಯಾಂಕ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada