ಪುನೀತ್ ರಾಜ್ ಕುಮಾರ್ ಚಿತ್ರದ ಹೆಸರು 'ಹುಡುಗ್ರು'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಶೀರ್ಷಿಕೆ ಏನಿಡಲಾಗುತ್ತದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ! ರಾಧಿಕಾ ಪಂಡಿತ್ ನಾಯಕಿಯಾಗಿರುವ ಈ ಚಿತ್ರಕ್ಕೆ 'ಹುಡುಗ್ರು' ಎಂದು ನಾಮಕರಣ ಮಾಡಲಾಗಿದೆ!ಈ ಚಿತ್ರ ಪುನೀತ್ ಸ್ವಂತ ನಿರ್ಮಾಣದ ಚಿತ್ರವಾಗಿದ್ದು ತಮಿಳಿನ ಯಶಸ್ವಿ ಚಿತ್ರ 'ನಾಡೋಡಿಗಳ್' ಚಿತ್ರದ ರೀಮೇಕ್.
ಪುನೀತ್ ಜೊತೆ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗೇಶ್ ಅಭಿನಯಿಸುತ್ತಿದ್ದಾರೆ. ರಮ್ಯಾ ಬಾರ್ನ, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ರಂಗಾಯಣ ರಘು ಮತ್ತು ವನಿತಾ ವಾಸು ಚಿತ್ರದ ಉಳಿದ ಪಾತ್ರಗಳಲ್ಲಿ ಕಾಣಿಸಲಿದ್ದಾರೆ.
ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಹುಡುಗ್ರು'. ವಿ ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ, ಮಠ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದೆ. ಈಗಾಗಲೆ 'ಹುಡುಗ್ರು' ಚಿತ್ರೀಕರಣ ಬೆಂಗಳೂರಿನ ನಾನಾ ಭಾಗಗಳಲ್ಲಿ ಭರದಿಂದ ಸಾಗಿದೆ.
More from Filmibeat
English summary
Puneet Rajkumar and Radhika Pandit starer new flick titled as "Hudugru". Maadesh is the director for this film for which Sathya Hegde is the cameraman.
ಪುನೀತ್ ರಾಜ್ ಕುಮಾರ್ ರಾಧಿಕಾ ಪಂಡಿತ್ ಹುಡುಗ್ರು ಶ್ರೀನಗರ ಕಿಟ್ಟಿ ಯೋಗೇಶ್ ವಿ ಹರಿಕೃಷ್ಣ ರಂಗಾಯಣ ರಘು puneeth rajkumar radhika pandit hudugru srinagara kitty yogish v hari krishna ramya barna


Click it and Unblock the Notifications











