For Quick Alerts
  ALLOW NOTIFICATIONS  
  For Daily Alerts

  ಪಿ ವಾಸು ನಿರ್ದೇಶನದಲ್ಲಿ ರಾಧಿಕಾ ಕುಮಾರಸ್ವಾಮಿ ಚಿತ್ರ

  By Rajendra
  |

  ಕಳೆದ ವರ್ಷ ರಾಧಿಕಾ ಕುಮಾರಸ್ವಾಮಿ ತಮ್ಮ 'ಲಕ್ಕಿ' ಚಿತ್ರದ ಮೂಲಕ ಹೆಚ್ಚು ಹೆಚ್ಚು ಸುದ್ದಿ ಮಾಡಿ ತಮ್ಮ ಜನಪ್ರಿಯತೆಯನ್ನು ಮತ್ತೆ ಮತ್ತೆ ಸಾಬೀತುಪಡಿಸಿಕೊಂಡಿದ್ದರು. ಇದೇ ಬಿಸಿಯಲ್ಲಿ ರಾಧಿಕಾ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

  ರಾಧಿಕಾ ಕುಮಾರಸ್ವಾಮಿ ನಿರ್ಮಿಸಲಿರುವ ಮತ್ತೊಂದು ಚಿತ್ರವನ್ನು ಕನ್ನಡ ಹಾಗೂ ತಮಿಳಿನ ಯಶಸ್ವಿ ನಿರ್ದೇಶಕ ಪಿ ವಾಸು ನಿರ್ದೇಶಿಸಲಿದ್ದಾರೆ. ಈಗಾಗಲೆ ಅವರು 'ಆಪ್ತಮಿತ್ರ' ಹಾಗೂ 'ಆಪ್ತರಕ್ಷಕ' ಎರಡು ಭರ್ಜರಿ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಈಗ ಉಪೇಂದ್ರ ಜೊತೆ 'ಆರಕ್ಷಕ' ಚಿತ್ರಗಳನ್ನು ನಿರ್ದೇಶಿಸುತ್ತಿರುವ ವಾಸುಗೆ ರಾಧಿಕಾ ಕುಮಾರಸ್ವಾಮಿ ಭರ್ಜರಿ ಆಫರ್ ನೀಡಿದ್ದಾರೆ.

  ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಚಿತ್ರವನ್ನು ನಿರ್ಮಿಸುವ ಜೊತೆಗೆ ರಾಧಿಕಾ ಬಣ್ಣವನ್ನೂ ಹಚ್ಚುತ್ತಿರುವುದು. ಸುದೀರ್ಘ ಸಮಯದ ಬಳಿಕ ಕ್ಯಾಮೆರಾ ಫೇಸ್ ಮಾಡಲಿದ್ದಾರೆ. ಚಿತ್ರದ ಉಳಿದ ವಿವಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಸದ್ಯಕ್ಕೆ ರಾಧಿಕಾ 'ಲಕ್ಕಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Kannada actress Radhika Kumaraswamy has been off the hook since quite a while and she has been busy with her maiden production venture Lucky. It is heard that she is going to produce another film which would be directed by P Vasu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X