»   »  ಅನು ಚಿತ್ರಕ್ಕಾಗಿ ಕೊಚ್ಚೆಯಲ್ಲಿ ಮಿಂದೆದ್ದ ಪೂಜಾ!

ಅನು ಚಿತ್ರಕ್ಕಾಗಿ ಕೊಚ್ಚೆಯಲ್ಲಿ ಮಿಂದೆದ್ದ ಪೂಜಾ!

Posted By:
Subscribe to Filmibeat Kannada
ಡ್ಯೂಪ್ ಕಲಾವಿದರನ್ನು ಬಳಸದೆ ಎಷ್ಟೊ ಸಲ ಸಾಹಸ ಸನ್ನಿವೇಶಗಳಲ್ಲಿ ನಾಯಕ ನಟರು ಮಿಂಚಿದ್ದುಂಟು. ಆದರೆ ಬೆರಳೆಣಿಕೆಯ ನಾಯಕಿಯರು ಮಾತ್ರ ಸಾಹಸ ಸನ್ನಿವೇಶಗಳಲ್ಲಿ ನಟಿಸಲು ಧೈರ್ಯ ಮಾಡಿದ್ದಾರೆ. ಆ ಸಾಲಿಗೆ ಈಗ ಹೊಸದಾಗಿ ಪೂಜಾಗಾಂಧಿ ಸೇರ್ಪಡೆಯಾಗಿದ್ದಾರೆ.

ಹೌದು 'ಅನು' ಚಿತ್ರದಲ್ಲಿನ ಸಹಜ ನಟನೆಗಾಗಿ ಪೂಜಾ ಗಾಂಧಿ ಕೊಚ್ಚೆ ನೀರಿನಲ್ಲಿ ಮುಳುಗೆದ್ದ್ದಿದ್ದಾರೆ.ಅನು ಚಿತ್ರದ ಸಾಹಸ ಸನ್ನಿವೇಶದಲ್ಲಿ ಅವರು ಓಡಿ ಬಂದು ಕೊಳದಲ್ಲಿ ಬೀಳುತ್ತಾರೆ. ಅಲ್ಲಿಂದ ಅವರನ್ನು ರಕ್ಷಿಸುವುದೇ ಸನ್ನಿವೇಶ.

ಇದಕ್ಕಾಗಿ ಮೈಸೂರು ಲ್ಯಾಂಪ್ಸ್ ನ ಆವರಣದಲ್ಲಿ ಪುಟ್ಟದೊಂದು ಕೊಳ ನಿರ್ಮಿಸಿ ಟ್ಯಾಂಕರ್ ಗಳಲ್ಲಿ ನೀರನ್ನು ತಂದು ಸುರಿಯಲಾಯಿತು. ಆದರೆ ಕೊಳಕ್ಕೆ ಕೊಚ್ಚೆ ನೀರು ಸೇರಿಕೊಂಡು ಅವರ ಮೈಯಲ್ಲಾ ತುರಿಕೆಯಾಗಿತ್ತಂತೆ. 'ಅನು' ಚಿತ್ರ ನೋಡಿದ ಪ್ರೇಕ್ಷಕರು ಬಹಳಷ್ಟು ರೋಮಾಂಚನಗೊಂಡಿದ್ದಾರೆ. ಆದರೆ ಅದರ ಹಿಂದಿನ ಕಷ್ಟ ಕಾರ್ಪಣ್ಯಗಳು ಅವರಿಗೆ ತಾನೆ ಹೇಗೆ ತಿಳಿಯುತ್ತವೆ. ನೈಜ ನಟನೆ ಎಂದರೆ ಇದೇ ಏನೋ?

(ದಟ್ಸ್ ಕನ್ನಡ ಚಿತ್ರವಾರ್ತೆ)
'ಅನು"ಕ್ಷಣ ತವಕ ತಲ್ಲಣ!
ಪೂಜಾಗಾಂಧಿ ನಟನೆಯ ಅನು ಟ್ರೈಲರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada