»   »  ಬರಗೂರು ಚಿತ್ರಗಳೆಡೆಗೆ ಸರೋಜಾದೇವಿ ಒಲವು

ಬರಗೂರು ಚಿತ್ರಗಳೆಡೆಗೆ ಸರೋಜಾದೇವಿ ಒಲವು

Subscribe to Filmibeat Kannada

ಪಂಚಭಾಷಾ ತಾರೆ ಡಾ.ಬಿ ಸರೋಜಾದೇವಿ ತಮ್ಮ ಮನದಾಳದ ಆಸೆ ಆಕಾಂಕ್ಷೆಯನ್ನು ತೋಡಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಸರೋಜಾದೇವಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ತಮ್ಮ ಹಲವು ದಿನಗಳ ಆಸೆಯನ್ನು ತೋಡಿಕೊಂಡರು.

ಸಮಾರಂಭದಲ್ಲಿ ಹೆಸರಾಂತ ಲೇಖಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸರೋಜಾದೇವಿ, ಬರಗೂರು ರಾಮಚಂದ್ರಪ್ಪ ಚಿತ್ರದಲ್ಲಿ ನಟಿಸಬೇಕೆಂಬ ತಮ್ಮ ಆಸೆಯನ್ನು ಹೇಳಿಕೊಂಡರು. ಇದಕ್ಕೆ ಬರಗೂರು ಸಹ ತಮ್ಮ ಸಮ್ಮತಿ ಸೂಚಿಸಿದ್ದಾರೆ.

ಇಂತಹ ಒಳ್ಳೆಯ ಅಭಿನೇತ್ರಿ ಅವಕಾಶ ಕೇಳಿದರೆ ಇಲ್ಲ ಎನ್ನಲು ಸಾಧ್ಯವೆ? ಸದ್ಯಕ್ಕೆ ಕಿರುತೆರೆಯಲ್ಲಿ ಬಿಜಿಯಾಗಿರುವ ರಾಮಚಂದ್ರಪ್ಪ ಮುಂದೆ ಚಿತ್ರನಿರ್ದೇಶಿಸುವ ಅವಕಾಶ ಸಿಕ್ಕರೆ ಖಂಡಿತ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ಸರೋಜಾದೇವಿಗೆ ಒಪ್ಪುವ ಪಾತ್ರ ಇದ್ದರೆ ಅವಕಾಶ ಕೊಡುವ ಭರವಸೆ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada