ಶಿವರಾಜ್ ಕುಮಾರ್ 'ಶಿವ' ಚಿತ್ರಕ್ಕೆ ಭರ್ಜರಿ ಟಿವಿ ರೈಟ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ ನಿರೀಕ್ಷಿತ 'ಶಿವ' ಚಿತ್ರದ ಸೆಟಲೈಟ್ ರೈಟ್ಸ್ ಮಾರಾಟವಾಗಿದೆ. ಖಾಸಗಿ ಚಾನೆಲ್ಲೊಂದು ಈ ಚಿತ್ರದ ಟಿವಿ ರೈಟ್ಸ್ ಅನ್ನು ರು. 2.5 ಕೋಟಿಗೆ ಪಡೆದುಕೊಂಡಿದೆ. ಶಿವ ಚಿತ್ರದ ಮೇಲೆ ಶಿವರಾಜ್ ಕುಮಾರ್ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ.
ಈ ಬೆಲೆ, ಶಿವಣ್ಣ ಅಭಿನಯದ ಎಲ್ಲಾ ಚಿತ್ರಗಳ ಟಿವಿ ರೈಟ್ಸ್ ಗಳಲ್ಲೇ ಅತ್ಯಧಿಕ ಎನಿಸಿದೆ. ಶಿವರಾಜ್ ಕುಮಾರ್ ಈ ಚಿತ್ರದ ಬಗ್ಗೆ ಪ್ರಾರಂಭದಿಂದಲೂ ಬಹಳಷ್ಟು ಒಳ್ಳೆಯ ಮಾತುಗಳನ್ನು ಆಡುತ್ತಾ ಬಂದಿದ್ದಾರೆ. ಅದಕ್ಕೋ ಏನೋ ಎಂಬಂತೆ, ಈ ಚಿತ್ರವೇ ಶಿವಣ್ಣನ ಈವರೆಗಿನ ಅತೀ ಹೆಚ್ಚು ಟಿವಿ ರೈಟ್ಸ್ ದರ ಹೊಂದಿದ ಚಿತ್ರವಾಗಿ ಹೊರಹೊಮ್ಮಿದೆ.
ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಶಿವಣ್ಣ ಹಾಗೂ ಓಂ ಪ್ರಕಾಶ್ ಸಂಗಮದ 'AK-47' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಕಾರಣಕ್ಕೇ ಈ ಚಿತ್ರವನ್ನು ಖರೀದಿ ಮಾಡಿದ್ದಾಗಿ ಚಾನೆಲ್ ಹೇಳಿಕೊಂಡಿದೆ. ಗ್ಲಾಮರ್ ಡಾಲ್ ರಾಗಿಣಿ ಈ ಚಿತ್ರದ ನಾಯಕಿಯಾಗಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಜೋಗಯ್ಯ ನಂತರ ಶಿವಣ್ಣ ಚಿತ್ರವೊಂದು ಈ ಮಟ್ಟಿಗೆ ಪ್ರಚಾರ ಪಡೆಯುತ್ತಿರುವುದು ಹೊಸ ಬೆಳವಣಿಗೆ ಎನ್ನಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











