»   »  ಉಲ್ಟಾ ಪಲ್ಟಾ ಖ್ಯಾತಿಯ ಮೈನಾ ಚಂದ್ರು ಇನ್ನಿಲ್ಲ

ಉಲ್ಟಾ ಪಲ್ಟಾ ಖ್ಯಾತಿಯ ಮೈನಾ ಚಂದ್ರು ಇನ್ನಿಲ್ಲ

Posted By:
Subscribe to Filmibeat Kannada

ರಂಗಭೂಮಿ ಕಲಾವಿದ, ಕಿರುತೆರೆ ಮತ್ತು ಚಲನಚಿತ್ರ ನಟ, ನಿರ್ಮಾಪಕ ಮೈನಾ ಚಂದ್ರು ಜುಲೈ 16ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ್ದು ಕೆಲದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಮೈನಾ ಚಂದ್ರು ಅವರು ಮುಖ್ಯವಾಗಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದರು. ಅವರ ನಟನೆಯ 'ಉಲ್ಟಾ ಪಲ್ಟಾ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಮೈನಾ ಚಂದ್ರು ಅವರು'ಉಲ್ಟಾ ಪಲ್ಟಾ' ಚಿತ್ರದ ನಿರ್ಮಾಪಕರೂ ಆಗಿದ್ದರು.

ಈಟಿವಿ ಕನ್ನಡ ವಾಹಿನಿಯ 'ಮಲೆಗಳಲ್ಲಿ ಮದುಮಗಳು' ಹಾಗೂ ಉದಯ ವಾಹಿನಿಯ 'ಕುಬೇರಪ್ಪನ ಮಕ್ಕಳು' ಧಾರಾವಾಹಿಗಳಲ್ಲಿ ಮೈನಾ ಚಂದ್ರು ನಟಿಸಿದ್ದರು. ಎನ್ ಎಸ್ ಶಂಕರ್ ನಿರ್ದೇಶನದ ಉಲ್ಟಾ ಪಲ್ಟಾ ಮತ್ತು ಯೋಗರಾಜ್ ಭಟ್ ನಿರ್ದೇಶನದ 'ಮಣಿ' ಚಿತ್ರಗಳನ್ನು ಮೈನಾ ನಿರ್ಮಿಸಿದ್ದರು.

ಯೋಗರಾಜ್ ಭಟ್ ನಿರ್ದೇಶನದ 'ರಂಗ ಎಸ್ ಎಸ್ ಎಲ್ ಸಿ' ಚಿತ್ರದಲ್ಲೂ ನಟಿಸಿದ್ದರು. ಅವರು ಗಾಯಕಿ ಶೋಭಾ ಅವರನ್ನು ಮದುವೆಯಾಗಿ ವಿವಾಹ ವಿಚ್ಛೇದನವನ್ನು ನೀಡದ್ದರು ಎಂದು ಮೂಲಗಳು ತಿಳಿಸಿವೆ. ಕಿರಿಯ ವಯಸ್ಸಿನಲ್ಲೇ ಅವರು ಹಠಾತ್ ನಿಧನ ಕನ್ನಡ ಚಿತ್ರೋದ್ಯಮದಲ್ಲಿ ಬರಸಿಡಿಲಿನಂತೆ ಎರಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada