»   »  ಯೋಗರಾಜಭಟ್ಟರ ಅಪೂರ್ವ ದೃಶ್ಯಕಾವ್ಯ ಮನಸಾರೆ

ಯೋಗರಾಜಭಟ್ಟರ ಅಪೂರ್ವ ದೃಶ್ಯಕಾವ್ಯ ಮನಸಾರೆ

Subscribe to Filmibeat Kannada

ಸಂಡೂರು, ಗಂಗಾವತಿ, ಕಾರವಾರ ಮತ್ತು ಮಡಿಕೇರಿಯಲ್ಲಿ ಸುಂದರ ದೃಶ್ಯ್ಗಗಳನ್ನು ಮನಸಾರೆ ಚಿತ್ರಕ್ಕಾಗಿ ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆಹಿಡಿದಿದ್ದಾರೆ. ಇದಕ್ಕಾಗಿ ಅತ್ಯುತ್ತಮ ಕ್ಯಾಮಾರಾಗಳನ್ನು ಬಳಸಿದ್ದಾರೆ. ನನ್ನ ಹಿಂದಿನ ಚಿತ್ರಗಳಂತೆ ಈ ಚಿತ್ರವೂ ಖಂಡಿತ ಕಣ್ಣಿಗೆ ರಸದೌತಣ ನೀಡಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಯೋಗರಾಜ ಭಟ್.

ದಿಗಂತ್‌ಗೆ ಈ ಚಿತ್ರ ಮರೆಯಲಾಗದ ಅನುಭವ ಕೊಟ್ಟಿದೆ. ಅಂದ್ರಿತಾ ರೇ ಕೂಡ ತಮಗೂ ಹಾಗೇ ಆಗಿದೆ ಅಂತ ಮಾತು ಸೇರಿಸುತ್ತಾರೆ. ಇಬ್ಬರೂ ನಡುರಾತ್ರಿ ಬ್ಯಾಡ್ಮಿಂಟನ್ ಆಡಿದ್ದಾರೆ. ಶೂಟಿಂಗ್ ನಡುವೆ ಪುರುಸೊತ್ತಿನಲ್ಲಿ ಮೋಂಬತ್ತಿ ಬೆಳಕಲ್ಲಿ ಊಟ ಮಾಡಿ ಸುಖಿಸಿದ್ದಾರೆ. ಇನ್ನೂ ದಣಿವು ಅನ್ನಿಸಿದಾಗ ಈಜುಕೊಳಕ್ಕೆ ಧುಮುಕಿ ಈಜಾಡಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ದಿಗಂತ್ ಪಾಲಿಗೆ ಇದು ಅದ್ಭುತ ಔಟಿಂಗ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada