For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ನರ್ತಕಿ ಚಿತ್ರಮಂದಿರದಲ್ಲಿ ಅನುಷ್ಕಾ ಶೆಟ್ಟಿ

  By Rajendra
  |

  ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಬೆಂಗಳೂರಿನಲ್ಲಿ ಶುಕ್ರವಾರ ದಿಢೀರ್ ಎಂದು ಪ್ರತ್ಯಕ್ಷವಾದರು. ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಪ್ರೇಮ್ ಕುಮಾರ್ ಅಭಿನಯದ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರವನ್ನು ತನ್ನ ತಾಯಿಯೊಂದಿಗೆ ವೀಕ್ಷಿಸಿದರು.

  ಈ ಸಂದರ್ಭದಲ್ಲಿ ಆಕೆ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಾಗಾರ್ಜುನ ಪುತ್ರ ನಾಗಚೈತನ್ಯ ಅವರನ್ನು ತಾವು ಮದುವೆಯಾಗುತ್ತಿರುವುದು ಕೇವಲ ವದಂತಿ ಅಷ್ಟೆ. ತಮಗೆ ನಾಗಚೈತನ್ಯ ಜೊತೆ ನಿಶ್ಚಿತಾರ್ಥವೂ ಆಗಿಲ್ಲ ಏನೂ ಇಲ್ಲ ಎಂದರು. ಮದುವೆಯಾಗುವುದಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ ಎಂದರು.

  ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ ಚಿತ್ರದನ್ನು ತೆಲುಗಿನಲ್ಲಿ ಮಾಡಿದರೆ ತಾವೇ ಅಭಿನಯಿಸುವುದಾಗಿ ತಿಳಿಸಿದರು. ಕನ್ನಡದಲ್ಲಿ ಒಳ್ಳೆ ಸ್ಕ್ರಿಪ್ಟ್ ಸಿಕ್ಕಿದರೆ ಖಂಡಿತ ಅಭಿನಯಿಸುತ್ತೇನೆ. ಅಪ್ಪ ಅಮ್ಮ ಎಲ್ಲಾ ಇಲ್ಲೇ ಇದ್ದಾರೆ.ಆಗಾಗ ಬೆಂಗಳೂರಿಗೆ ಬರುತ್ತಿರುತ್ತೇನೆ ಎಂದು ಕನ್ನಡದಲ್ಲೇ ಪಟಪಟನೆ ಅನುಷ್ಕಾ ಶೆಟ್ಟಿ ಮಾತನಾಡಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  South Indian actress Anushka Shetty watches Kannada movie Mathe Banni Prethsona in Narthaki theater, Bangalore on 17th June. At the same time she denies secret engagement with Naga Chaitanya. The reports are not true and they're just baseless rumours she said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X