For Quick Alerts
  ALLOW NOTIFICATIONS  
  For Daily Alerts

  ನಿರ್ದೆಶಕರ ಬಳಿ ' ಛಾನ್ಸ್' ಬೇಡಿದ ನಟಿ ರಮ್ಯಾ

  |

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ದೆಶಕರೊಬ್ಬರಲ್ಲಿ ಅವಕಾಶ ಕೇಳಿದ್ದಾರೆ. ಹತ್ತು ವರ್ಷಕ್ಕಿಂತ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿರುವ ರಮ್ಯಾ, ಕಳೆದ ಆರೇಳು ವರ್ಷಗಳಿಂದ ಟಾಪ್ ಒನ್ ನಟಿ. ಅವರಿಗೆ ಅವಕಾಶಕ್ಕೆ ಕೊರತೆಯೇ? ಅದೆಲ್ಲಾ ಅವರಿಗೇ ಗೊತ್ತು, ಆದರೆ "ನಿಮ್ಮ ಮುಂದಿನ ಚಿತ್ರದಲ್ಲಿ ನನಗೊಂದು ಅವಕಾಶ ಕೊಡಿ" ಎಂದಿದ್ದಾರಂತೆ ರಮ್ಯಾ.

  ಸುದ್ದಿ ಸುಳ್ಳಲ್ಲ. ರಮ್ಯಾಗೆ ಅವಕಾಶ ಕಡಿಮೆಯಾಗಿದೆ ಎಂದೂ ಅಲ್ಲ. ಮೊದಲ ಬಾರಿಗೆ ಹಿರಿತೆರೆಯಿಂದ ಕಿರುತೆರೆಗೆ ಬಂದು ಸಿದ್ಲಿಂಗು ಚಿತ್ರ ನಿರ್ದೆಶಿಸಿರುವ ವಿಜಯಪ್ರಸಾದ್ ಬಳಿ ರಮ್ಯಾ ಈ ಬೇಡಿಕೆ ಇಟ್ಟಿದ್ದಾರಂತೆ. ಕಾರಣ ಸಿದ್ದಿಂಗು ಚಿತ್ರದಲ್ಲಿ ಇನ್ನೂ ಮಾಡದಿದ್ದ, ವಿಭಿನ್ನ 'ಮಂಗಳಾ ಟೀಚರ್' ಪಾತ್ರ ನೀಡಿದ್ದಕ್ಕಾಗಿ ಖುಷಿಯಾಗಿದ್ದಾರೆ ರಮ್ಯಾ.

  ಸಿದ್ಲಿಂಗುವಿನಲ್ಲಿ ಸೀರೆ ನೀರೆಯಾಗಿ ಮಿಂಚಿರುವ ರಮ್ಯಾರನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಅದರಿಂದ ಸಖತ್ ಥ್ರಿಲ್ ಆಗಿರುವ ರಮ್ಯಾ, ವಿಜಯಪ್ರಸಾದ್ ಬಳಿ "ಸರ್, ನಿಮ್ಮ ಮುಂದಿನ ಚಿತ್ರದಲ್ಲಿ ನನಗೊಂದು ಪಾತ್ರ ಕೊಡಿ" ಎಂದು ಕೇಳಿದ್ದಾರೆ. ಅಲ್ಲಿಗೆ ನಿರ್ದೆಶಕರಾಗಿ ವಿಜಯಪ್ರಸಾದ್ ಗೆದ್ದಿದ್ದಾರೆ ಎಂದೇ ಹೇಳಬಹುದು. ಸಿದ್ಲಿಂಗು ಚಿತ್ರ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಅವರ ಮುಂದಿನ ಚಿತ್ರ ಯಾವಾಗ ಬರುತ್ತೋ? ರಮ್ಯಾ ಆಸೆ ಅದ್ಯಾವಾಗ ನೆರವೇರುತ್ತೋ!

  ಒಟ್ಟಿನಲ್ಲಿ ರಮ್ಯಾಗೆ ಅವಕಾಶ ಸಾಕಷ್ಟಿದ್ದರೂ ಸಿದ್ಲಿಂಗುವಿನ ಮಂಗಳಾ ಟೀಚರ್ ರೀತಿಯ ವಿಭಿನ್ನ ಪಾತ್ರ ಸಿಗುತ್ತಿಲ್ಲ ಎಂಬುದು ಖಚಿತ. ಜೊತೆಗೆ, ರಮ್ಯಾ ಪಾತ್ರಗಳ ವಿಷಯದಲ್ಲಿ ಸಾಕಷ್ಟು ಚೂಸಿ, ಅವರಿಗಿಷ್ಟವಾದರೆ ಕೇಳಿ ಪಡೆಯುವುದಕ್ಕೂ ಹಿಂದೆ-ಮುಂದೆ ನೋಡುವುದಿಲ್ಲ ಎಂಬುದೂ ಜಾಹೀರಾದಂತಾಗಿದೆ. ಅಷ್ಟಿಲ್ಲದೇ ನಂಬರ್ ಒನ್ ಆಗಿರುತ್ತಾರೆಯೇ ಎನ್ನುತ್ತಿದೆ ಗಾಂಧಿನಗರದ ಗಲ್ಲಿಯಲ್ಲೊಂದು ಗುಮ್ಮ! (ಒನ್ ಇಂಡಿಯಾ ಕನ್ನಡ)

  English summary
  Actress Ramya asked Chance to a director in his next movie. He is none other than Vijayaprasad, Sidlingu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X