»   » ವೀರ ಪರಂಪರೆ ತಂಡ ಸೇರಿದ ಐಂದ್ರಿತಾ ರೇ

ವೀರ ಪರಂಪರೆ ತಂಡ ಸೇರಿದ ಐಂದ್ರಿತಾ ರೇ

Posted By:
Subscribe to Filmibeat Kannada

ವೀರ ಪರಂಪರೆ ಚಿತ್ರಕ್ಕಾಗಿ ಎಸ್ ನಾರಾಯಣ್ ನಡೆಸಿದ ನಾಯಕಿಯ ಆಯ್ಕೆ ಪ್ರಕ್ರಿಯೆ ಸುಖಾಂತ್ಯಗೊಂಡಿದೆ. ಬೆಂಗಳೂರು ಬೆಡಗಿ ಐಂದ್ರಿತಾ ರೇ ಅವರನ್ನು ಸುದೀಪ್ ಜೋಡಿಯಾಗಿ ನಟಿಸುವುದು ಖಾತ್ರಿಯಾಗಿದೆ. ಐಂದ್ರಿತಾ ರೇ ಅವರ ನೂರು ಜನ್ಮಕೂ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.ಸುದೀಪ್ , ಅಂಬರೀಷ್, ರಮೇಶ್ ಭಟ್ ಮುಂತಾದ ಹಿರಿಯರ ಜೊತೆ ನಟಿಸುವ ಥ್ರಿಲ್ ನಲ್ಲಿ ಐಂದ್ರಿತಾ ಇದ್ದಾರೆ.

ಎಸ್ ನಾರಾಯಣ್ ಅವರ ಧರ್ಮಪತ್ನಿ ಭಾಗ್ಯವತಿ ನಾರಾಯಣ್ ನಿರ್ಮಾಣದ ಈ ಚಿತ್ರ ಖಂಡಿತಾ ಯಾವುದೇ ಚಿತ್ರದ ರಿಮೇಕ್ ಅಲ್ಲವಂತೆ. ತಮಿಳು ಮೂಲದ ಚಿತ್ರದ ನಕಲು ಎಂದೆಲ್ಲಾ ಗಾಂಧಿನಗರದಲ್ಲಿ ಹರಡಿದ್ದ ಗುಸುಗುಸು ಸುದ್ದಿಗೆ ನಾರಾಯಣ್ ಬ್ರೇಕ್ ಹಾಕಿದ್ದಾರೆ. ಪ್ರಪ್ರಥಮ ಬಾರಿಗೆ ಕಿಚ್ಚ ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಒಟ್ಟಿಗೆ ನಟಿಸುತ್ತಿರುವುದು ವೀರ ಪರಂಪರೆ ಚಿತ್ರದ ವಿಶೇಷ.

ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಿಂದ ಆರಂಭವಾಗುವ ಸಾಧ್ಯತೆಯಿದೆ. ವೀರಪರಂಪರೆ ತಂಡವನ್ನು ಶ್ರೀನಿವಾಸಮೂರ್ತಿ, ಶರಣ್ , ಕೋಮಲ್ ಸೇರಿದ್ದಾರೆ. ಏ.2ರಂದೇ ಶೂಟಿಂಗ್ ಆರಂಭಿಸುವ ಸೂಚನೆಗಳನ್ನು ಎಸ್ ನಾರಾಯಣ್ ಬಳಗದವರೊಬ್ಬರೂ ನೀಡಿದ್ದಾರೆ. ಸಾಹಸ, ಸಂತಾಪ, ಪ್ರೇಮ ಪ್ರೀತಿಗಳ ಹೂರಣದ ಕಥೆಯುಳ್ಳ ಈಚಿತ್ರದ ಹಾಡುಗಳನ್ನು ಈಗಾಗಲೇ ನಾರಾಯಣ್ ಧ್ವನಿಮುದ್ರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada