»   »  ಮನಸಿನ ಮಾತಿನಲ್ಲಿ ಮುಳುಗಿದ ಅಂದ್ರಿತಾ ರೇ

ಮನಸಿನ ಮಾತಿನಲ್ಲಿ ಮುಳುಗಿದ ಅಂದ್ರಿತಾ ರೇ

Subscribe to Filmibeat Kannada
'ಪ್ರೀತಿನೇ ಆ ದೇವರು ತಂದ ಆಸ್ತಿ ನಮ್ಮ ಬಾಳಿಗೆ' ಎಂದರು ಹಿರಿಯರು. ಪರಿಶುದ್ದ ಪ್ರೀತಿಗಾಗಿ ಪ್ರಾಣವನ್ನೇ ಅರ್ಪಿಸಿದ ಉದಾಹರಣೆ ನಮ್ಮಲ್ಲಿ ಸಾಕಷ್ಟಿವೆ. ನಾಯಕ ಅಜಯ್ ಕೂಡ ಹೀಗೆ. ಪ್ರೀತಿಗಾಗಿ ಏನು ಮಾಡಲು ಸಿದ್ದ.

ಬೊಂಬೆ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಜಯ್ ಪ್ರೇಯಸಿ ಅಂದ್ರಿತಾ ರೇ ಮೇಲೆ ಜೀವವನ್ನೇ ಇಟ್ಟಿರುತ್ತಾರೆ. ಬೊಂಬೆ ಕೊಳ್ಳುವ ನೆಪದಲ್ಲಿ ಅಜಯ್ ಬಳಿ ಬಂದ ಖಳನಟ ಹರೀಶ್‌ರಾಯ್ ಬೊಂಬೆ ಮಾರುವ ಹಾಗೆ ನಿನ್ನ ಪ್ರೇಯಸಿಯನ್ನು ಮಾರಿಬಿಡು. ಎಷ್ಟು ಬೇಕಾದರೂ ಕೊಟ್ಟು ಖರೀದಿಸುತ್ತೇನೆ ಎನ್ನುತ್ತಾರೆ. ಈ ಮಾತನ್ನು ಕೇಳಿದ ಯಾವ ಪ್ರೇಮಿ ತಾನೆ ಸುಮ್ಮನಿರುತ್ತಾನೆ ಹೇಳಿ? ನಾಯಕ ಅಜಯ್ ಕೂಡ ಖಳನಟನ ಮಾತಿನಿಂದ ಕುಪಿತನಾಗಿ ಅವನೊಂದಿಗೆ ಹೊಡೆದಾಟಕ್ಕೆ ಮುಂದಾಗುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಅಂದ್ರಿತಾ ರೇ ಇಬ್ಬರ ನಡುವಿನ ಮಾರಾಮಾರಿಗೆ ಮಂಗಳ ಹಾಡುವ ಸನ್ನಿವೇಶವನ್ನು 'ಮನಸಿನ ಮಾತು' ಚಿತ್ರಕ್ಕಾಗಿ ನಗರದ ಗೋಪಾಲನ್ ಮಾಲ್‌ನಲ್ಲಿ ಸಾಹಸ ಸಂಯೋಜಕ ಪಳನಿರಾಜ್ ಅವರ ಸಾರಥ್ಯದಲ್ಲಿ ನಿರ್ದೇಶಕ ಅನಂತರಾಜು ಚಿತ್ರೀಕರಿಸಿಕೊಂಡರು.

ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕಳೆದಸಾಲಿನ ಯಶಸ್ವಿ ಚಿತ್ರಗಳಲೊಂದಾದ 'ಮಸ್ತ್ ಮಜಾ ಮಾಡಿ' ಚಿತ್ರವನ್ನು ನಿರ್ದೇಶಿಸಿದ್ದ ಅನಂತರಾಜು ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿ.ರಾಜಶೇಖರ್ ಸಹನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ಸಂಯೋಜಿಸುತ್ತಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರಾಂ ನಾರಾಯಣ್ ಸಂಭಾಷಣೆ, ಅನಿಲ್.ಬಿ.ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರಕ್ಕೆ ಅಜಯ್, ಅಂದ್ರಿತಾ ರೇ, ಅವಿನಾಶ್, ಸಾಧು ಕೋಕಿಲಾ, ತಾರಾ, ಲೋಹಿತ್ ಮುಂತಾದವರ ತಾರಾಬಳಗವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚಿಗರೆ ಕಂಗಳ ಚೆಲುವೆ ಅಂದ್ರಿತಾ ರೇ
2008ರಲ್ಲಿ ಮಿಂಚಿದ ಕನ್ನಡದ ಪಂಚ ನಟಿಯರು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada