»   »  'ಮೈಸೂರು ಹುಡುಗ'ನಾಗಿ ಚಾಲೆಂಜಿಂಗ್ ಸ್ಟಾರ್

'ಮೈಸೂರು ಹುಡುಗ'ನಾಗಿ ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada

ಮೂಲತಃ ಮೈಸೂರಿನವರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಮೈಸೂರು ಹುಡುಗ'ನಾಗುವ ಅದ್ಭುತ ಅವಕಾಶ ಸಿಕ್ಕಿದೆ. ಹೌದು ದರ್ಶನ ಅಭಿನಯಿಸಲಿರುವ ಹೊಸ ಚಿತ್ರಕ್ಕೆ 'ಮೈಸೂರು ಹುಡುಗ 'ಎಂದು ಹೆಸರಿಡಲಾಗಿದೆ. ಚೆಲುವೆಯೆ ನಿನ್ನ ನೋಡಲು ಚಿತ್ರದ ನಿರ್ದೇಶಕ ರಘುರಾಮ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ರಘುರಾಮ್ ರ ಚೊಚ್ಚಲ ಚಿತ್ರ 'ಚೆಲುವೆಯೆ...' ಚಿತ್ರವನ್ನು ನಿರ್ಮಿಸಿರುವ ಎನ್ ಎಂ ಸುರೇಶ್ ಈ ಚಿತ್ರಕ್ಕೆ ನಿರ್ಮಾಪಕರು. ಶಿವರಾಜ್ ಕುಮಾರ್ ಅಭಿನಯದ ಚೆಲುವೆಯೆ ನಿನ್ನ ನೋಡಲು ಚಿತ್ರದ ಚಿತ್ರೀಕರಣ ಮುಗಿದ ಕೂಡಲೇ ಮೈಸೂರು ಹುಡುಗ ಚಿತ್ರ ಸೆಟ್ಟೇರಲಿದೆ.

ಚಿತ್ರದ ಇತರೆ ತಾರಾಗಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಮೈಸೂರು ಹುಡುಗನಿಗೆ ಜತೆಯಾಗುವ ಹುಡುಗಿ ಯಾರೆಂಬುದು ಸದ್ಯಕ್ಕೆ ಸಸ್ಪೆನ್ಸ್. ಚಿತ್ರದ ಬಹುತೇಕ ಚಿತ್ರೀಕರಣ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೇ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಮೈಸೂರಿನ ಸುತ್ತಮುತ್ತ 250ಕ್ಕೂ ಹೆಚ್ಚು ತಾಣಗಳನ್ನು ಪಟ್ಟಿಮಾಡಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada