»   »  ಗುರೂಜಿ ಡಾಟ್ ಕಾಮ್ ನಲ್ಲಿ ರಾಜ್ ಹಾಡು

ಗುರೂಜಿ ಡಾಟ್ ಕಾಮ್ ನಲ್ಲಿ ರಾಜ್ ಹಾಡು

Subscribe to Filmibeat Kannada

ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತಿನಂತೆ ಹಳೆಯ ಹಾಡುಗಳನ್ನು ಗುನುಗುವ ಸಂಗೀತ ಪ್ರೇಮಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಭಾರತದ ಸರ್ಚ್ ಇಂಜಿನ್ ನಲ್ಲಿ ಮಂಚೂಣಿಯಲ್ಲಿರುವ ಗುರೂಜಿ ಡಾಟ್ ಕಾಮ್, ಡಾ.ರಾಜಕುಮಾರ್ ಅವರ ಎಲ್ಲಾ ಹಾಡುಗಳನ್ನು ತನ್ನ ಸರ್ಚ್ ಇಂಜಿನ್ ನಲ್ಲಿ ಶೇಖರಿಸಿ, ಅಣ್ಣಾವ್ರ ಅಭಿಮಾನಿಗಳಿಗೆ ರಸದೌತಣ ನೀಡಲು ಸನ್ನದ್ಧವಾಗಿದೆ.

ಅಣ್ಣಾವ್ರ ಜನಪ್ರಿಯ ಹಾಡುಗಳಾದ ಆಡಿಸಿ ನೋಡು ಬೀಳಿಸಿ ನೋಡು, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಶಿವಪ್ಪ ಕಾಯೋತಂದೆ, ಇದು ಯಾರು ಬರೆದ ಕಥೆಯೋ .. ಮುಂತಾದ ಹಾಡುಗಳು ಕೇಳುಗರ ಮನತಣಿಸಲು ಸಿದ್ಧವಾಗಿವೆ.

ಎಂಪಿ3 ಶೈಲಿಯಲ್ಲಿರುವ ಈ ಹಾಡುಗಳು ಈಗಾಗಲೇ ಕೇಳುಗರ ಮೆಚ್ಚುಗೆ ಪಡೆದಿವೆ ಎಂದು ಗುರೂಜಿ ಡಾಟ್ ಕಾಮ್ ತಿಳಿಸಿದೆ. ಈ ತಾಣದಲ್ಲಿ ರವಿಚಂದ್ರ, ಮಯೂರ, ಬಹದ್ದೂರ್ ಗಂಡು, ನಾ ನಿನ್ನ ಮರೆಯಲಾರೆ, ಭಕ್ತ ಕುಂಬಾರ, ಶ್ರಾವಣ ಬಂತು ಸೇರಿದಂತೆ 40 ಕ್ಕೂ ಅಧಿಕ ಚಿತ್ರಗಳ ಗೀತೆಗಳಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada