ಸ್ವಾಮಿ ವಿವೇಕಾನಂದರ 3D ಚಿತ್ರವೀಕ್ಷಣೆಗೆ ಅವಕಾಶ

ಇಸ್ರೋದ ಸ್ಪೇಸ್ ವಿಜ್ಞಾನಿ ಪದ್ಮಶ್ರೀ ಆರ್ ಎಂ ವಾಸಗಂ, ವಿವೇಕಾನಂದ ಹೌಸ್ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ 3D ಗ್ಲಾಸ್ ಉಪಯೋಗಿಸಿ ಈ 3D ಅನಿಮೇಶನ್ ಚಿತ್ರವನ್ನು ಥಿಯೇಟರಿನಲ್ಲಿ ಪೂರ್ವಭಾವಿಯಾಗಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಟ್ಟು ಜನರಲ್ಲಿ ಪುಳಕ ಮೂಡಿಸಿದರು.
1897ರಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಮರಳಿದ ವಿವೇಕಾನಂದರು 9 ದಿನಗಳು ತಂಗಿದ್ದ ಜಾಗದಲ್ಲಿ ಈ ವಿವೇಕಾನಂದ ಹೌಸ್ ನಿರ್ಮಿಸಲಾಗಿದೆ. ಭಾರತ ಹಾಗೂ ಇಲ್ಲಿನ ಸಂಸ್ಕೃತಿ ಕುರಿತು ಅವರಿಗಿದ್ದ ಅಪಾರ ಪ್ರೀತಿ ಗೌರವಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ. 'ಎಕ್ಸ್ ಪಿರಿಯನ್ಸ್ ವಿವೇಕಾನಂದ' ಎಂಬ ಕಾರ್ಯಕ್ರಮದ ಮೂಲಕ ವಿವೇಕಾನಂದರ ಸಂದೇಶಗಳನ್ನು ಯುವಜನತೆಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯಲಿದೆ.
"ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸ ಬರಬಹುದು. ಬುಧವಾರದ ಹೊರತಾಗಿ ಬೆಳಿಗ್ಗೆ 10ರಿಂದ ಮದ್ಯಾಹ್ನ 12, ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7.30ರ ವೆರೆಗೆ ಇದು ವೀಕ್ಷಕರಿಗೆ ತೆರೆದಿರುತ್ತದೆ. ಟಿಕೆಟ್ ದರ ರು. 10 ಹಿರಿಯರಿಗೆ ಹಾಗೂ ಕಿರಿಯರಿಗೆ ರು. 5. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 91-44-28446188 ಹಾಗೂ ವೆಬ್ ಸೈಟ್ www.vivekanandahouse.org, ಸಂಪರ್ಕಿಸಬಹುದು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











