For Quick Alerts
  ALLOW NOTIFICATIONS  
  For Daily Alerts

  ಮಂಗಳೂರು ಸಕಲೇಶಪುರ ಹೆದ್ದಾರಿಯಲ್ಲಿ 'ಎದೆಗಾರಿಕೆ'

  By Rajendra
  |

  ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರ 'ಎದೆಗಾರಿಕೆ'. ಈ ಚಿತ್ರಕ್ಕೆ ಮಂಗಳೂರು-ಸಕಲೇಶಪುರ ಹೆದ್ದಾರಿಯಲ್ಲಿ ಚಿತ್ರೀಕರಣ ನಡೆದಿದೆ. ಅತುಲ್ ಕುಲಕರ್ಣಿ, ಸೃಜನ್ ಲೋಕೇಶ್, ಧರ್ಮ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

  ಇದರೊಂದಿಗೆ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಜನವರಿ ಎರಡನೇ ವಾರದಿಂದ ಆರಂಭವಾಗಿದೆ. 'ಕಳ್ಳರ ಸಂತೆ' ಚಿತ್ರದ ನಿರ್ದೇಶನಕ್ಕಾಗಿ ಉತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಸುಮನಾ ಕಿತ್ತೂರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಗ್ನಿಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಿ.ರಾಖೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪಕ್ ಪಂಡಿತ್ ಸಂಗೀತ ನೀಡಿದ್ದಾರೆ.

  ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅಂಥೋನಿ ರೂಬೆನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಆದಿತ್ಯ, ಶಶಿಕುಮಾರ್, ಅತುಲ್ ಕುಲಕರ್ಣಿ, ಅಚ್ಯುತಕುಮಾರ್, ಸೃಜನ್ ಲೋಕೇಶ್, ಧರ್ಮ, ಶರತ್ ಲೋಹಿತಾಶ್ವಾ, ಭಾವನಾ, ಮೇಘನಾ ಮುಂತಾದವರಿದ್ದಾರೆ. ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್‌ಅಮಾನ್‌ಬಚ್ಚನ್ ಹಾಗೂ ಎಂ.ಎಸ್.ರವೀಂದ್ರ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. (ಒನ್‌ಇಂಡಿಯಾ ಕನ್ನಡ)

  English summary
  Kannada director Sumana Kittur has completed the shooting of first schedule for his forthcoming Movie Edegarike at Mangalore-Sakleshpur. 'Edegarike' book written by Agni Sridhar. The title of the book written on the underworld days is retained by director Sumana Kitthur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X