»   » ಭೂತಯ್ಯನ ರೂವಾರಿ ಚಂದೂಲಾಲ್ ಇನ್ನಿಲ್ಲ

ಭೂತಯ್ಯನ ರೂವಾರಿ ಚಂದೂಲಾಲ್ ಇನ್ನಿಲ್ಲ

Subscribe to Filmibeat Kannada
Chandulal Jain is no more
ಚಂದೂಲಾಲ್ ಜೈನ್ ಇನ್ನಿಲ್ಲ. ಮೂವತ್ತೈದು ಕನ್ನಡ ಸಿನಿಮಾಗಳ ನಿರ್ಮಾಪಕ ಇನ್ನಿಲ್ಲ. ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ವೀರಪ್ಪನ್, ಗಂಗವ್ವ ಗಂಗಾಮಾಯಿ, ಹೇಮಾವತಿ, ಪ್ರಾಯ ಪ್ರಾಯ ಪ್ರಾಯ, ಬೆತ್ತಲೆಸೇವೆ ಚಿತ್ರಗಳ ರೂವಾರಿ ಕಣ್ಮರೆ.

ಇಂದು ಬೆಳಗ್ಗೆ (ಡಿಸೆಂಬರ್ 17ರ ಗುರುವಾರ) 9.45ಕ್ಕೆ ಜೈನ್ ಕೊನೆಯುಸಿರೆಳೆದಿದ್ದಾರೆ. ಪತ್ನಿ ಲೀಲಾ ಹಾಗೂ ಮಕ್ಕಳಾದ ರಾಜಕುಮಾರ್ ಮತ್ತು ರೋಹಿತ್‌ರನ್ನು ಅವರು ಅಗಲಿದ್ದಾರೆ. ಕಳೆದ ಜನವರಿ 21ರಂದು ತಮ್ಮ 74ನೇ ಹುಟ್ಟುಹಬ್ಬದ ಜೊತೆಗೆ ದಾಂಪತ್ಯದ ಐವತ್ತರ ಸಂಭ್ರಮ ಆಚರಿಸಿಕೊಂಡಿದ್ದ ಜೈನ್ ಇನ್ನು ನೆನಪು ಮಾತ್ರ.

ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದರೂ ಜೈನ್ ಸ್ವಂತ ಮನೆಯೊಂದನ್ನು ಮಾಡಿಕೊಂಡಿರಲಿಲ್ಲ. ಜೈನ್ ಅವರಿಗೊಂದು ಸೈಟು ಕೊಡಿ ಅಂತ ಬಿಡಿಎಗೆ ಖುದ್ದು ಪಾರ್ವತಮ್ಮ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದರು. ಕಾರಿನ ಐಷಾರಾಮಿ ಬದುಕು ಅವರದಾಗಿರಲಿಲ್ಲ. ಇಸ್ಪೀಟ್ ಆಡುವ ಚಟವಿತ್ತು. ಹಾಗೆಂದು ಅವರನ್ನು ಜೂಜುಕೋರ ಎನ್ನುವಂತಿರಲಿಲ್ಲ. ಐದು ಅಥವಾ ಹತ್ತು ರೂಪಾಯಿ ಪಣಕ್ಕಿಡುತ್ತಿದ್ದ ಜೈನ್ ಅವರಿಗೆ ಇಸ್ಪೀಟ್ ಮನರಂಜನೆಯಾಗಿತ್ತು.

ಜೈನ್ ಅವರ ಕನ್ನಡ ಪ್ರೀತಿಯ ಬಗ್ಗೆ ವರನಟ ರಾಜ್‌ಕುಮಾರ್ ಅಚ್ಚರಿಪಟ್ಟಿದ್ದರು. ಈ ಅಚ್ಚರಿಯಲ್ಲೇ ಅವರು ಜೈನ್‌ಗೆ ಕಾಲ್‌ಷೀಟ್ ಕೊಟ್ಟಿದ್ದರು. ಎಪ್ಪತ್ತನಾಲ್ಕರ ಹುಟ್ಟುಹಬ್ಬರ ಸಂದರ್ಭದಲ್ಲಿ 'ವಿದೇಶಿ" ಎಂಬ ಸಿನಿಮಾ ನಿರ್ಮಿಸುವ ಕನಸನ್ನು ಚಂದೂಲಾಲ್ ಹೊರಗೆಡವಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada