»   » ಕನ್ನಡಕ್ಕೆ ಮಿಸ್ ಮೀನಾಕ್ಷಿಯಾಗಿ ಮತ್ತೆ ನಿಖಿತಾ ತುಕ್ರಲ್

ಕನ್ನಡಕ್ಕೆ ಮಿಸ್ ಮೀನಾಕ್ಷಿಯಾಗಿ ಮತ್ತೆ ನಿಖಿತಾ ತುಕ್ರಲ್

Posted By:
Subscribe to Filmibeat Kannada

ನಟಿ ನಿಖಿತಾ ತುಕ್ರಲ್ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಲಾಟೆ ಬಳಿಕ ನಿಖಿತಾ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ನಿಖಿತಾ ಮಾತ್ರ 'ಮಿಸ್ ಮೀನಾಕ್ಷಿ'ಯಾಗಿ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆಗೆ ಧುಮುಕಿದ್ದಾರೆ.

ಈ ಚಿತ್ರ ಮುಂಬರುವ ಜನವರಿಗೆ ಸೆಟ್ಟೇರುವ ಸಾಧ್ಯತೆಗಳಿವೆ. ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಮಹಿಳಾ ಪ್ರಧಾನ ಚಿತ್ರ. ಹಾಗಂತ ಸ್ಟೋರಿಯಲ್ಲಿ ಧಮ್ ಇಲ್ಲ ಅನ್ಕೋಬೇಡಿ. ಏಕೆಂದರೆ ಚಿತ್ರದ ಅಡಿಬರಹ "ಇವಳು ಸಖತ್ ಹಾಟ್ ಮಗಾ" ಎಂದಿಡಲಾಗಿದೆ.

ಚಿತ್ರದಲ್ಲಿ ಇಬ್ಬರು ನಾಯಕಿಯರಂತೆ. ಮತ್ತೊಬ್ಬ ನಾಯಕಿಯ ಹುಡುಕಾಟ ನಡೆದಿದೆ. ನಾಯಕ ನಟ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ನಿರ್ದೇಶಕರ ಹುಡುಕಾಟವೂ ನಡೆದಿದೆಯಂತೆ. ಚಿತ್ರದ ತಾಂತ್ರಿಕ ಹಾಗೂ ತಾಂತ್ರಿಕೇತರ ಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. (ಏಜೆನ್ಸೀಸ್)

English summary
After a long gap actress Nikita Thukral back to Kannada films. She is all set to get ready for making a strong performance in Sandalwood. she has now signed one more Kannada film titled as Miss Meenakshi. More details about the movie are awaited.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada