For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಕಾದಂಬರಿಕಾರ ಅನಂತರಾವ್ ಪುನರಾಗಮನ

  By Staff
  |

  * ಜಯಂತಿ

  ನನ್ನ ಬದುಕು ಇರುವುದೇ ಬರೆಯುವುದಕ್ಕೆ. ಹಿಟ್ ಕೊಡದಿದ್ದರೆ ಹಣ ವಾಪಸ್. ಸುಮ್ಮನೆ ರೀಮೇಕ್ ಮಾಡಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ. ಇಂಥ ವಿಷಯ ಅಂತ ಹೇಳಲಿ. ಎಲ್ಲವನ್ನೂ ಬರೆಯಲು ನಾನು ಸಿದ್ಧ. ಐ ಕೆನ್ ರೈಟ್ ಎನಿಥಿಂಗ್ ಬ್ಲಡಿ ಆನ್ ದಿಸ್ ಅರ್ತ್...

  ಇದನ್ನು ಸವಾಲು ಎಂದುಕೊಳ್ಳಿ. ಆತ್ಮವಿಶ್ವಾಸ ಅಂತ ಬೇಕಾದರೂ ಭಾವಿಸಿ. ಈ ಮಾತುಗಳನ್ನು ಆಡಿರುವ ವ್ಯಕ್ತಿ ಕೊಟ್ಟಿರುವ ಸಕ್ಸಸ್ ನೋಡಿದರೆ, ಇದನ್ನು ಆತ್ಮವಿಶ್ವಾಸ ಎಂದೇ ಹೇಳಬೇಕು. ಆ ವ್ಯಕ್ತಿಯೇ ಎಚ್.ಕೆ.ಅನಂತರಾವ್.

  ಅಂತ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದದ್ದೇ ಒಂದು ಕಥೆ. ಎನ್.ಬಿ.ಸಿಂಗ್ ಆಗ ಪ್ರಜಾವಾಣಿಯ ಸಹ ಸಂಪಾದಕರಾಗಿದ್ದರು. ಅದೊಂದು ದಿನ ಅವರ ಕೈಗೆ ಅನಂತರಾವ್ ಬರೆದ ಅಂತ ಸಿಕ್ಕಿದೆ. ಅದರಲ್ಲಿನ ಥ್ರಿಲ್ಲರ್ ಅಂಶಗಳನ್ನು ಮನಗಂಡ ಸಿಂಗ್, ಧಾರಾವಾಹಿಯಾಗಿ ಪ್ರಕಟಿಸಿದರು. ಧಾರಾವಾಹಿ ಜನಪ್ರಿಯವಾಯಿತು. ರಾಜೇಂದ್ರ ಸಿಂಗ್ ಬಾಬು ಅದನ್ನು ಸಿನಿಮಾ ಮಾಡಿದರು. ಕನ್ವರ್‌ಲಾಲ್, ಸುಶೀಲ್‌ಕುಮಾರ್ ಪಾತ್ರಗಳು ಸಂಚಲನೆ ಮೂಡಿಸಿದವು. ಸಿನಿಮಾ ಸೂಪರ್ ಡೂಪರ್ ಹಿಟ್. ಅದಕ್ಕೂ ಮಿಗಿಲಾಗಿ ಟ್ರೆಂಡ್ ಸೆಟರ್.

  ಅಂತ ತೆರೆಕಂಡಿದ್ದು 1981ರಲ್ಲಿ. ಅಲ್ಲಿಂದ ಏನಿಲ್ಲವೆಂದರೂ ಹತ್ತು ಹದಿನೈದು ವರ್ಷ ಭಾರತೀಯ ಚಿತ್ರಗಳಲ್ಲಿ ಅದರ ಛಾಯೆಯಿತ್ತೆನ್ನಿ. ಅನಂತರಾವ್ ಪ್ರಕಾರ ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳು ಅಂತ ತರಹದ ವಸ್ತು ಅಡಗಿಸಿಟ್ಟುಕೊಂಡು ಬಂದಿವೆ. ಅಷ್ಟೇ ಏಕೆ, ಹಿಂದಿಯ ಡಾನ್ ಕೂಡ ಅದರದ್ದೇ ಛಾಯೆಯ ಕಥೆ ಎಂದು ಅವರು ಎದೆ ಸೆಟೆಯುತ್ತಾರೆ.

  ಹೈದರಾಬಾದ್‌ನಲ್ಲಿ ಖಾಸಗಿ ಕೆಲಸದಿಂದ ನಿವೃತ್ತರಾಗಿರುವ ಅನಂತರಾವ್ ಮತ್ತೆ ತೀವ್ರವಾಗಿ ಬರವಣಿಗೆಯಲ್ಲಿ ತೊಡಗುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ಒಬ್ಬ ನಿರ್ಮಾಪಕ ರೂಮು ಹಾಕಿಸಿಕೊಟ್ಟು, ಕಥೆ ಕೇಳಿ ನಡುನೀರಲ್ಲಿ ಕೈಬಿಟ್ಟು ಹೊರಟುಹೋಗಿದ್ದಾನೆ. ಅದರಿಂದ ಕಂಗೆಡದ ಅನಂತರಾವ್ ಅವಿರತವಾಗಿ ಬರೆಯುತ್ತಲೇ ಇದ್ದಾರೆ. ಶಸ್ತ್ರಚಿಕಿತ್ಸೆ ಕಾದಂಬರಿ ಅಚ್ಚಿಗೆ ಸಿದ್ಧವಾಗಿದೆ. ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಅಂತ ಅಪ್‌ಡೇಟ್ ಆಗಿ 'ಅಂತ- ಈಗ' ಎಂದಾಗಿದೆ. ಶಸ್ತ್ರಚಿಕಿತ್ಸೆ ಮೆಡಿಕಲ್ ಥ್ರಿಲ್ಲರ್. ಅದಕ್ಕೂ ಟ್ರೆಂಟ್ ಸೆಟರ್ ಆಗುವ ಲಕ್ಷಣಗಳಿವೆ ಅಂತಾರೆ ಅನಂತರಾವ್.

  ಅವರ ಅಂಕ ಕಾದಂಬರಿಯನ್ನು ರಾಜೇಂದ್ರ ಎಂಬುವರು ಕಳ್ಳ ಪೊಲೀಸ್ ಹೆಸರಿನಲ್ಲಿ ಸಿನಿಮಾ ಮಾಡಿದರು. ರಾಜೇಂದ್ರ ಅವರ ನಟಿಸುವ ತೆವಲಿನ ಕಾರಣ ಸಿನಿಮಾ ಮೇಲೇಳಲಿಲ್ಲ. ಆಮೇಲೆ ಒಂದೆರಡು ಕಿರುಚಿತ್ರಗಳಿಗೂ ಅನಂತರಾವ್ ಕಥೆ ಒದಗಿಸಿದ್ದಾರೆ. ಈಗ ಅವರು ಸಿನಿಮಾ ಹಾಗೂ ಧಾರಾವಾಹಿಗಳಿಗೆ ಬರೆಯಲು ಸಿದ್ಧ. ಆಸಕ್ತರು ಮನಸ್ಸು ಮಾಡಬೇಕಷ್ಟೆ. ಅಂದಹಾಗೆ, ಅವರು ಬೆಂಗಳೂರಿನ ಗಾಂಧಿನಗರದ ಮೋತಿ ಮಹಲ್ ಹೋಟೆಲಿನ ಏಳನೇ ಮಹಡಿಯ ಕೋಣೆಯಲ್ಲಿ ತಂಗಿದ್ದಾರೆ.

  ಇದನ್ನೂ ಓದಿ
  ಚಾಪ್ಲಿನ್ ನಲ್ಲೂ ಕಳಂಕ ಕಂಡ ಮತಾಂಧರು
  ಎಲ್ಲಾ ಓಕೆ ಮೀಸೆ ಯಾಕೆ ಎಂದ ದುಬೈ ಬಾಬು!
  ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X