For Quick Alerts
  ALLOW NOTIFICATIONS  
  For Daily Alerts

  ಗಣೇಶ್ ರೋಮಿಯೋ ಚಿತ್ರಕ್ಕೆ ಪಾಪ್ ಶೈಲಿಯ ಗೀತೆ

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಲವರ್ ಬಾಯ್ ಪಾತ್ರದಲ್ಲಿ 'ರೋಮಿಯೋ' ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ "ಬೆಳ್ಳಗೆ ಎದ್ದು ಕಾಫಿ ಕುಡಿ ಏನಾದ್ರು ಹಲ್ಲುಜ ಬೇಡಿ ಮಲ್ಕೊಂಡೇ ಸ್ನಾನ ಮಾಡಿ ನನ್ನ ಹೆಸರೇ ರೋಮಿಯೋ..." ಎಂಬ ಪಾಪ್ ಶೈಲಿಯ ಗೀತೆಯನ್ನು ಸಿದ್ದಪಡಿಸಿದ್ದಾರೆ. ನಿರ್ದೇಶಕ ಸಂತು(ಅಲೆಮಾರಿ) ಈ ಹಾಡನ್ನು ಬರೆದಿದ್ದಾರೆ.

  ನಾಯಕ ಗಣೇಶ್, ರಂಗಾಯಣರಘು, ಸಾಧುಕೋಕಿಲಾ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಗೀತೆಯಲ್ಲಿ ಅಭಿನಯಿಸುವುದರೊಂದಿಗೆ ಸ್ವತಃ ತಾವೇ ಹಾಡಿರುವುದು ವಿಶೇಷ. ಚಿತ್ರದ ಪ್ರಚಾರಕ್ಕಾಗಿ ಸಿದ್ದವಾಗಿರುವ ಈ ಗೀತೆ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ಅಭಿಪ್ರಾಯ ನಿರ್ದೇಶಕ ಶೇಖರ್ ಅವರದು.

  ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Golden Star Ganesh and Bhavana lead Kannada film Romeo in the direction of Shekhar is getting first copy. Music director Arjun Janya used pop style song in this movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X