»   » ಬಾಕ್ಸಾಫೀಸ್ ಘರ್ಷಣೆ ತಪ್ಪಿಸಿದ ಪುನೀತ್ 'ರಾಮ್'

ಬಾಕ್ಸಾಫೀಸ್ ಘರ್ಷಣೆ ತಪ್ಪಿಸಿದ ಪುನೀತ್ 'ರಾಮ್'

Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರ ಈ ಶುಕ್ರವಾರ(ಡಿ.18) ಬಿಡುಗಡೆಯಾಗುತ್ತಿಲ್ಲ. ರಾಮ್ ಚಿತ್ರದ ಬಿಡುಗಡೆಯನ್ನು ಡಿ.25ಕ್ಕೆ ಮುಂದೂಡಲಾಗಿದೆ. ಎರಡು ಚಿತ್ರಗಳ ನಡುವಿನ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ರಾಮ್ ಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದೂಡಲಾಗಿದೆ ಎನ್ನುತ್ತವೆ ಮೂಲಗಳು.

ಕಳೆದ ವಾರ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಬಾಕ್ಸಾಫೀಸಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ರಾಮ್ ಚಿತ್ರವನ್ನು ಬಿಡುಗಡೆ ಮಾಡುವುದುದರಿಂದ ಎರಡು ಚಿತ್ರಗಳಿಗೂ ಬಾಕ್ಸಾಫೀಸ್ ಗಳಿಕೆಯಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ.ಹಾಗಾಗಿ 'ರಾಮ್' ಚಿತ್ರ ಒಂದು ವಾರ ತಡವಾಗಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದೆ.

ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಜತೆ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ 'ರಾಮ್' ನ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಪ್ರಿಯಾಮಣಿ ನಟಿಸಿರುವ ಪ್ರಥಮ ಕನ್ನಡ ಚಿತ್ರ ಕೂಡ. ವಿವಿಧ ಸಾಹಿತಿಗಳು ರಚಿಸಿರುವ ಚಿತ್ರದ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಧ್ವನಿಸುರುಳಿಗಳು ಕೇಳುಗರ ಮನ ಗೆದ್ದಿದೆ.

ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನವಿದೆ. ಪಳನಿರಾಜ್ , ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ, ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada