»   »  ಪಿವಿಆರ್ : ಇನ್ನೂ 30 ಚಿತ್ರ ಪರದೆಗಳ ಅನಾವರಣ

ಪಿವಿಆರ್ : ಇನ್ನೂ 30 ಚಿತ್ರ ಪರದೆಗಳ ಅನಾವರಣ

Subscribe to Filmibeat Kannada
PVR Cinemas, Bengaluru
ಮುಂಬೈ, ಸೆ. 17: ಭಾರತದ ಅತಿ ವಿಸ್ತಾರವಾದ ಸಿನಿಮಾ ಮಂದಿರ ಜಾಲವನ್ನು ಹೊಂದಿರುವ ಪಿವಿಆರ್ , ಮುಂದಿನ ಆರು ತಿಂಗಳಲ್ಲಿ 30-40 ಪರದೆಗಳನ್ನು ಅನಾವರಣಗೊಳಿಸಲು ಸಜ್ಜಾಗಿದೆ.ಈ ಕಾರ್ಯಕ್ಕೆ ಸುಮಾರು 1.5 ರಿಂದ 1.7ಕೋಟಿ ರು ಬಂಡವಾಳ ಹೂಡಿರುವ ಪಿವಿಆರ್ ಸಂಸ್ಥೆ ,ಚಿತ್ರಮಂದಿರಕ್ಕೆ ಇನ್ನಷ್ಟು ಜನರನ್ನು ಸೆಳೆಯಲಿದೆ ಎಂದು ಪಿವಿಆರ್ ಸಂಸ್ಥೆಯ ಉಪಾಧ್ಯಕ್ಷ ವಿಜಯ್ ಕಪೂರ್ ಹೇಳಿದ್ದಾರೆ.

ಸಿನಿಮಾ ಚಿತ್ರಮಂದಿರಗಳ ಕ್ಷೇತ್ರಕ್ಕೆ 1997ರಲ್ಲಿ ಕಾಲಿರಿಸಿದ ಪಿವಿಆರ್ ಸಂಸ್ಥೆಗೆ ಪ್ರಿಯ ಎಕ್ಸಿಬಿಟರ್ಸ್ ಪ್ರೈ.ಲಿ ಹಾಗೂ ವಿಲೇಜ್ ರೋಡ್ ಷೋ ಲಿ. ಸಾಥ್ ನೀಡುತ್ತಿವೆ. 2010ರ ವೇಳೆಗೆ 300ರಿಂದ 400 ಕೋಟಿ ರು ವೆಚ್ಚದಲ್ಲಿ ಸುಮಾರು 250 ಚಿತ್ರಪರದೆಗಳನ್ನು ಅನಾವರಣಗೊಳಿಸುವುದಾಗಿ ಪಿವಿಆರ್ ನ ಪ್ರಕಟಣೆಯಲ್ಲಿ ಹೇಳಲಾಗಿದೆ.

ದೆಹಲಿ, ಫರೀದಾಬಾದ್, ಗುರ್ ಗಾಂವ್, ಲೂಧಿಯಾನ, ಗಾಜಿಯಾಬಾದ್ , ಮುಂಬೈ, ಬೆಂಗಳೂರು, ಹೈದರಾಬಾದ್,ಲಕ್ನೋ, ಇಂದೋರ್, ಔರಂಗಾಬಾದ್, ಬರೋಡ ಹಾಗೂ ಲಥೋರ್ ನಲ್ಲಿ ಪಿವಿಆರ್ ಚಿತ್ರಮಂದಿರಗಳ ಒಟ್ಟು 108 ಪರದೆಗಳು ಚಿತ್ರರಸಿಕರ ಮನ ತಣಿಸುತ್ತಿವೆ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada