»   »  ರಾಜ್ ದ ಶೋಮ್ಯಾನ್ ಫ್ಲಾಪ್ ಆಗಿಲ್ಲ: ಪುನೀತ್

ರಾಜ್ ದ ಶೋಮ್ಯಾನ್ ಫ್ಲಾಪ್ ಆಗಿಲ್ಲ: ಪುನೀತ್

Posted By:
Subscribe to Filmibeat Kannada

ರಾಜ್ ದ ಶೋಮ್ಯಾನ್ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿದೆ. ರಾಜ್ ಫ್ಲಾಪ್ ಚಿತ್ರವಲ್ಲ. ಈ ಚಿತ್ರ 50ಕ್ಕಿಂತಲೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣುತ್ತದೆ. ಗಳಿಕೆಯ ದೃಷ್ಟಿಯಲ್ಲೂ ಈ ಚಿತ್ರ ಗೆದ್ದಿದೆ. ಗುಣಮಟ್ಟ ವಿಚಾರದಲ್ಲಿ ರಾಜಿಯಾಗುವವನಲ್ಲ ನಾನು. ರಾಜ್ ಬಗ್ಗೆ ಯಾಕೆ ಹಾಗೆ ಬರೆದರೋ ಗೊತ್ತಿಲ್ಲ ಎಂದು ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಹೊಸ ಚಿತ್ರ 'ರಾಮ್' ಕುಟುಂಬ ಪ್ರಧಾನ ಚಿತ್ರವಾಗಿದೆ. ಈ ಚಿತ್ರದಲ್ಲಿ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಿದ್ದೇವೆ. ಈ ರೀತಿಯ ಪಾತ್ರವನ್ನು ಹಿಂದೆ ನಾನೆಲ್ಲೂ ಮಾಡಿಲ್ಲ. ಹೊಸತನದಿಂದ ಕೂಡಿದ ಪಾತ್ರ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಮತ್ತು ಸಹ ನಟ ರಾಮ್ ಜತೆ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು.

ಜನಕ್ಕೆ ಹತ್ತಿರವಾಗುವ ಪಾತ್ರಗಳಲ್ಲಿ ನಾನು ನಟಿಸುತ್ತೇನೆ ಎನ್ನುವ ಪುನೀತ್, ರಾಮ್ ಚಿತ್ರದಲ್ಲಿ ವರನಟ ರಾಜ್ ಕುಮಾರ್ ನಟನೆಯ ಹೊಸ ಬೆಳಕು, ಹಾಲು ಜೇನು ಮತ್ತು ಚೆಲಿಸುವ ಮೋಡಗಳು ಪಾತ್ರಗಳನ್ನು ಮತ್ತೊಮ್ಮೆ ನೆನಪಿಸಲಿದ್ದಾರೆ. ಈ ರೀತಿಯ ಸರಳ, ಸುಂದರ ಕತೆಗಳೊಂದಿಗೆ ಇಂದಿನ ನಿರ್ದೇಶಕರು ಯಾಕೆ ಕತೆ ಹೆಣೆಯುವುದಿಲ್ಲ ಎಂಬುದು ಪುನೀತ್ ಅಳಲು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada