»   » ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ

ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ

Posted By:
Subscribe to Filmibeat Kannada

ಕನಸುಗಾರ ರವಿಚಂದ್ರನ್ ಅಭಿನಯದ 'ಹೂ' ಚಿತ್ರ ಕಡೆಗೂ ತೆರೆಕಾಣುತ್ತಿದೆ. ರವಿಚಂದ್ರನ್ ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಂದರೆ ಮೇ.30ರಂದು ರವಿಚಂದ್ರನ್ ಹುಟ್ಟುಹಬ್ಬ, ಮೇ.28ರಂದು ಚಿತ್ರಮಂದಿರಗಳಲ್ಲಿ 'ಹೂ' ಬಿರಿಯಲಿದೆ.

ಹೂ ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಮೇ.28ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ 'ಪ್ರೈವೇಟ್ ನಂಬರ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಚಿತ್ರದ ಮೊದಲರ್ಧ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುತ್ತದೆ. ಉಳಿದ ಭಾಗ ಎಲ್ಲರನ್ನೂ ರಂಜಿಸಲಿದೆ ಎಂದು ರವಿ ಹೇಳಿದ್ದಾರೆ.

ಬೆಂಗಳೂರು ಕೆ ಜಿ ರಸ್ತೆಯ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ಹೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಮೇ.21ರಂದು ಸಂತೋಷ್ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ರವಿಚಂದ್ರನ್ ಪರ್ಯಾರ್ಯ ಚಿತ್ರಮಂದಿರದ ಬಗ್ಗೆಯೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

'ಮಂಜಿನ ಹನಿ' ಚಿತ್ರವನ್ನು ಹನಿಸಲು ರವಿಚಂದ್ರನ್ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ರವಿಚಂದ್ರನ್ ತಮ್ಮ ಸೀಟನ್ನು ಅವರ ಪುತ್ರ ಮನೋಜ್ ಬಿಟ್ಟುಕೊಡಲಿದ್ದಾರೆ. ರವಿಚಂದ್ರನ್ ನಿವೃತ್ತಿ ಘೋಷಿಸಿಕೊಳ್ಳುತ್ತಾರಾ? ಅಥವಾ ತೆರೆಯ ಹಿಂದೆ ಸರಿದು ಆಕ್ಷನ್, ಕಟ್ ಹೇಳುತ್ತಾರಾ? ಕಾದು ನೋಡಬೇಕಾಗಿದೆ.

ಅಂದಹಾಗೆ ಚಿತ್ರರಂಗಕ್ಕೆ ರಜೆ ಘೋಷಿಸಿದ್ದ ನಮಿತಾ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೀರಾ ಜಾಸ್ಮಿನ್ ಸಹ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಡಬ್ಬಲ್ ಧಮಾಕಾ. ಜಿಎಸ್ ವಿ ಸೀತಾರಾಂ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರಣ್ ಅವರ ತಾರಾಗಣ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ದಿನೇಶ್ ಗಾಂಧಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada