»   » ಎಸ್ ನಾರಾಯಣ್ ಗೆ 'ಅಪ್ಪಯ್ಯ'ನಾದ ಕಿಟ್ಟಿಬಾವ

ಎಸ್ ನಾರಾಯಣ್ ಗೆ 'ಅಪ್ಪಯ್ಯ'ನಾದ ಕಿಟ್ಟಿಬಾವ

Posted By:
Subscribe to Filmibeat Kannada

ಕಲಾ ಸಾಮ್ರಾಟ್ ಎಸ್ ನಾರಾಯಣ್ ಇದೀಗ ಸತ್ಯಕಥೆ ಆಧಾರಿತ ಚಿತ್ರ 'ಅಪ್ಪಯ್ಯ'ನನ್ನು ನಿರ್ಮಾಣ ಮತ್ತು ನಿರ್ದೆಶನ ಮಾಡುತ್ತಿದ್ದಾರೆ. ಅಪ್ಪಯ್ಯ ಸತ್ಯಕಥೆ, ಹುಟ್ಟಿಕೊಂಡಿದ್ದು ನೆಲದಮೇಲಲ್ಲ, ವಿಮಾನದಲ್ಲಿ ಎಂಬುದು ನಾರಾಯಣರ ಹೇಳಿಕೆ. ಅದಕ್ಕೆ ತಕ್ಕ ತಾಳ, ಮೇಳ, ಸ್ವರ, ಸಂಗೀತದ ಸಂಗತಿಗಳು ಇಲ್ಲಿವೆ, ನಾರಾಯಣ್ ಮಾತುಗಳಲ್ಲಿ ಓದಿಕೊಳ್ಳಿ...

ಮೂರು ವರ್ಷದ ಹಿಂದೆ ನಾನು ಎಲ್ಲಿಗೋ ಪ್ರಯಾಣಿಸಲು ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ತೆಗೆದುಕೊಂಡು ಕುಳಿತಿದ್ದೆ. ವ್ಯಕ್ತಿಯೊಬ್ಬ ಬಂದು 25 ಸಾವಿರ ರೂಪಾಯಿ ಕೇಳಿದ. ಬೋರ್ಡಿಂಗ್ ಪಾಸ್ ಹೊಂದಿದ್ದ ಆ ವ್ಯಕ್ತಿ ತೀರಾ ಹಳ್ಳಿಗಾಡಿನ ಮನುಷ್ಯನಂತೆ ಕಾಣುತ್ತಿದ್ದ. ನಾನ್ಯಾಕೆ ನಿನಗೆ 25 ಸಾವಿರ ರು. ಕೊಡಬೇಕು ಎಂದು ಕೇಳಿದೆ.

ಆಗ ಆ ವ್ಯಕ್ತಿ ಒಂದು (ಸ್ವಂತ?) ಕಥೆ ಹೇಳಿ, "ನೀವೀಗ ದುಡ್ಡು ಕೊಟ್ಟರೆ ಎರಡು ಜೀವ ಉಳಿಯುತ್ತದೆ" ಎಂದ. ಮನಸ್ಸು ಕರಗಿದ ನಾನು ಆತನ ವಿಳಾಸ ಕೂಡ ಕೇಳದೇ 25 ಸಾವಿರ ರು. ಕೊಟ್ಟು ಕಳಿಸಿದೆ. ನಂತರ ಪೇಪರ್, ಪೆನ್ನು ತೆಗೆದುಕೊಂಡು ಆತ ಹೇಳಿದ ಕಥೆಯನ್ನು ಯಥಾವತ್ತಾಗಿ ಬರೆದು 'ಅಪ್ಪಯ್ಯ' ಎಂಬ ಹೆಸರಿಟ್ಟು ಸಿನಿಮಾ ಮಾಡುತ್ತಿದ್ದೇನೆ" ಎಂದು ಹೇಳಿ ಅಪ್ಪಯ್ಯನ ಹಿಂದಿರುವ ಗುಟ್ಟು ಬಿಚ್ಚಿಟ್ಟಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Director S Narayan producing and direction a movie called 'Appayya'. He told, this is a Real Story. Srinagara Kitty is the Hero.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada