»   »  ಸ್ನೇಹಾಗೆ ಅಶ್ಲೀಲ ಎಸ್ಎಂಎಸ್; ಉದ್ಯಮಿ ಬಂಧನ

ಸ್ನೇಹಾಗೆ ಅಶ್ಲೀಲ ಎಸ್ಎಂಎಸ್; ಉದ್ಯಮಿ ಬಂಧನ

Subscribe to Filmibeat Kannada

ಪ್ರೀತ್ಸೆ ಪ್ರೀತ್ಸೆ ಎಂದು ನಟಿ ಸ್ನೇಹಾ ರ ಹಿಂದೆ ಬಿದ್ದಿದ್ದ ರೋಮಿಯೋನನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಾಗೆ ಅಶ್ಲೀಲ ಎಸ್ ಎಂ ಎಸ್ ಗಳನ್ನು ರವಾನಿಸುತ್ತಾ ತನ್ನನ್ನು ಮದುವೆಯಾಗುವಂತೆ ಈತ ಒತ್ತಾಯಿಸುತ್ತಿದ್ದ. ಈತನ ಕಿರಿಕಿರಿಗೆ ಬೇಸತ್ತು ಸ್ನೇಹಾ ಪೊಲೀಸರ ದೂರು ನೀಡಿದರು. ಕಡೆಗೆ ಪೊಲೀಸರು ರಿಯಲ್ ಎಸ್ಟೇಟ್ ಉದ್ಯಮಿ ರಾಘವೇಂದ್ರ(35) ನನ್ನು ಬಲೆಗೆ ಕೆಡವಿದರು. ಮಹಿಳಾ ಕಿರುಕುಳ ಕಾಯಿದೆಯ ಅಡಿ ಪೊಲೀಸರು ದೂರು ದಾಖಲಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಈತನನ್ನು ಒಪ್ಪಿಸಿದ್ದಾರೆ.

ರಾಘವೇಂದ್ರ ಬಲೆಗೆ ಬಿದ್ದ ಬಗೆ!
ಸ್ನೇಹಾ ನೀಡಿದ ದೂರಿನ ಅನ್ವಯ ಚೆನ್ನೈನ ಪೊಲೀಸರು ಈತನಿಗಾಗಿ ಬಲೆ ಬೀಸಿದರು. ಸ್ನೇಹಾ ಈತನಿಗೆ ಫೋನ್ ಮಾಡಿ ಟಿ.ನಗರದ ಹೋಟೇಲೊಂದಕ್ಕೆ ಬರುವಂತೆ ಸೂಚನೆ ನೀಡಿದರು. ಸ್ನೇಹಾ ತನ್ನ ಬಲೆಗೆ ಬಿದ್ದ ಖುಷಿಯಲ್ಲಿ ರಾಘವೇಂದ್ರ ಸೀದಾ ಹೋಟೇಲ್ ಗೆ ಹೋದ. ಆದರೆ ಅಲ್ಲಿ ಸ್ನೇಹಾ ಇರಲಿಲ್ಲ. ಬದಲಾಗಿ ಪೊಲೀಸರು ಈತನಿಗಾಗಿ ಕಾದಿದ್ದರು.

ಕಳೆದ ಎಂಟು ತಿಂಗಳಿಂದ ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ. ಸ್ನೇಹಾ ಅವರ ತಂದೆಯನ್ನು ಭೇಟಿ ಮಾಡಿ ಆಟೋಗ್ರಾಫ್ ಭಾಗ 2 ತೆಗೆಯುವುದಾಗಿಯೂ ತಿಳಿಸಿದ್ದ. ನಿರ್ದೇಶಕ ಚೇರನ್ ಅವರನ್ನು ಭೇಟಿಯಾಗಿ ಎಂದು ಸ್ನೇಹಾರ ತಂದೆ ಸೂಚಿಸಿದ್ದರು.

ನಂತರ ಆತ ಅಶ್ಲೀಲ ಎಸ್ ಎಂಎಸ್ ಗಳನ್ನು ಸ್ನೇಹಾಗೆ ರವಾನಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆಯೂ ಕೇಳುತ್ತಿದ್ದ. ಸ್ನೇಹಾರ ಚಿತ್ರೀಕರಣ ಸ್ಥಳಗಳಿಗೆ ನಿರಂತರ ಭೇಟಿ ಕೊಡುತ್ತಿದ್ದ ಎಂಬುದನ್ನು ಪೊಲೀಸರ ಬಳಿ ರಾಘವೇಂದ್ರ ಬಾಯ್ಬಿಟ್ಟಿದ್ದಾನೆ.

''ತಮ್ಮ ಬಾಹ್ಯ ಸೌಂದರ್ಯವನ್ನು ವರ್ಣಿಸುವ ಅಶ್ಲೀಲ ಎಸ್ ಎಂ ಎಸ್ ಸಹ ಕಳುಹಿಸಿದ್ದ. ಕೆಲವೊಮ್ಮೆ ಎಸ್ ಎಂ ಎಸ್ ಗಳ ಮೂಲಕ ಬೆದರಿಕೆಯೂ ಹಾಕುತ್ತಿದ್ದ. ಈತನ ಕಿರುಕುಳ ತಾಳಲಾರದೆ ಕಡೆಗೆ ನಮ್ಮ ಪಿಆರ್ ಒ ಸಹಾಯದಿಂದ ಪೊಲೀಸರಿಗೆ ದೂರು ನೀಡಿದೆ ಎನ್ನುತ್ತಾರೆ'' ಸ್ನೇಹಾ. ಸಮಸ್ಯೆಯನ್ನು ಬಗೆಹರಿಸಿದ ಚೆನ್ನೈ ಪೊಲೀಸರಿಗೆ ಸ್ನೇಹಾ ಧನ್ಯವಾದಗಳನ್ನು ಸ್ನೇಹಾ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada