»   » ಎಲ್ಲೆಡೆ ಜೋಗಯ್ಯ ಕ್ರೇಜ್, ಮತ್ತೆ ಗೆದ್ದ ಪ್ರೇಮ್ ಪ್ರಚಾರ ತಂತ್ರ

ಎಲ್ಲೆಡೆ ಜೋಗಯ್ಯ ಕ್ರೇಜ್, ಮತ್ತೆ ಗೆದ್ದ ಪ್ರೇಮ್ ಪ್ರಚಾರ ತಂತ್ರ

Posted By:
Subscribe to Filmibeat Kannada
Jogayya Movie Publicity
ನಿರ್ದೇಶಕ ಪ್ರೇಮ್ ಗೆ ಇದೇನು ಹೊಸತಲ್ಲ. ಏಕ್ಸ್ ಕ್ಯೂಸ್ ಮಿ ಚಿತ್ರದಿಂದ ಆತ ಇದನ್ನೇ ಮಾಡಿಕೊಂಡು ಬಂದಿದ್ದು, ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ, ಆಕಾಂಕ್ಷೆ, ನಿರೀಕ್ಷೆ ಹುಟ್ಟು ಹಾಕಿ, ಚಿತ್ರರಸಿಕರು ಕ್ರೇಜ್ ನಲ್ಲಿರುವಂತೆ ಮಾಡುವಲ್ಲಿ ಪ್ರೇಮ್ ಎಲ್ಲಾ ನಿರ್ದೇಶಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ನಿರ್ದೇಶಕ ಪ್ರೇಮ್ ಹಾಗೂ ಜೋಗಯ್ಯ ಚಿತ್ರದ ವಿತರಣೆ ಹಕ್ಕು ಪಡೆದ ಶ್ರೀನಿವಾಸ್ ಅವರ ತಂತ್ರ ಫಲಿಸಿದೆ. ನಿರ್ಮಾಪಕಿ ರಕ್ಷಿತಾ ಪ್ರೇಮ್ ಖುಷಿಯಿಂದ ಕುಣಿಯುವುದೊಂದೆ ಬಾಕಿ. ಕಪಾಲಿಗೆ ಮತ್ತೆ ಮತ್ತೆ ಕಾಲ್ ಮಾಡಿ ಟಿಕೆಟ್ ಸೋಲ್ಡ್ ಔಟ್ ಬಗ್ಗೆ ಕನ್ ಫರ್ಮ್ ಮಾಡಿಕೊಳ್ಳುತ್ತಿದ್ದಾರೆ. [ಟ್ರೈಲರ್ ನೋಡಿರಿ]

ಮಂದಾಕಿನಿ ಚಿತ್ರ ಮಾಡಿ ಜೇಬು ಖಾಲಿ ಮಾಡಿಕೊಂಡಿದ್ದ ನಿರ್ಮಾಪಕ ಶ್ರೀನಿವಾಸ್, ಜೋಗಯ್ಯ ಚಿತ್ರದ ವಿತರಣೆ ಹಕ್ಕು ಸಿಕ್ಕಿದ್ದೇ ತಡ ಅವರ ಲಕ್ ಬದಲಾಯಿಸಿಬಿಟ್ಟಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸುವ ಮುನ್ನ ಪ್ರೇಮ್ ಜೊತೆ ನಡೆಸಿದ ಚರ್ಚೆ ಫಲ ಕೊಟ್ಟಿದೆ. ಎಲ್ಲೆಡೆ ಜೋಗಯ್ಯ ಚಿತ್ರಕ್ಕಾಗಿ ಜನ ಕಾತುರದಿಂದ ಕಾದಿದ್ದಾರೆ. [ಜೋಗಯ್ಯ ಗ್ಯಾಲರಿ]

ಶಿವರಾಜ್ ಕುಮಾರ್ ಅವರ ನೂರನೇ ಚಿತ್ರದ ಪ್ರಚಾರದ ವೈಖರಿ ಹೀಗಿದೆ:


* ಬೆಂಗಳೂರಿನಲ್ಲಿ 170 ಪ್ರಮುಖ ಸ್ಥಳಗಳಲ್ಲಿ ದೊಡ್ಡದೊಡ್ಡ ಹೋರ್ಡಿಂಗ್ ಗಳನ್ನು ಹಾಕಲಾಗಿದೆ.
* 17 ಲಕ್ಷ ಪೋಸ್ಟರ್ ಗಳನ್ನು ಪ್ರಿಂಟ್ ಮಾಡಲಾಗಿದ್ದು, ಚಿತ್ರಮಂದಿರಗಳು ಸೇರಿದಂತೆ ರಾಜ್ಯದ ಗೋಡೆಗಳ ಮೇಲೆ ರಾರಾಜಿಸಲಿದೆ.
* ಜೋಗಯ್ಯನ ಚಿತ್ರವುಳ್ಳ ಸುಮಾರು 50,೦೦೦ ಟೀ ಶರ್ಟ್ ಹಾಗೂ ಕ್ಯಾಪ್ ಗಳನ್ನು ಅಭಿಮಾನಿಗಳಿಗೆ ಹಂಚಲಾಗುತ್ತದೆ.
* 14 ಲಕ್ಷ ಆಡಿಯೋ ಸಿಡಿಗಳನ್ನು ಪುಕ್ಕಟೆಯಾಗಿ ಅಭಿಮಾನಿಗಳಿಗೆ ಹಂಚಲು ನಿರ್ಧರಿಸಲಾಗಿದೆ.
* ಬೆಂಗಳೂರು, ತುಮಕೂರು ಹಾಗೂ ಕೋಲಾರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಲಾಗುತ್ತದೆ. ಒಟ್ಟು ಎರಡಾಳೆತ್ತರದ 65ಕ್ಕೂ ಫ್ಲೆಕ್ಸ್ ಬ್ಯಾನರ್ ಗಳು ಸಿದ್ಧಗೊಂಡಿದೆ.
* ಚಿತ್ರಮಂದಿರಗಳ ಮುಂದೆ ದೊಡ್ಡ ದೊಡ್ಡ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಅವುಗಳಿಗೆ ಕ್ಷೀರಾಭಿಷೇಕ ಗ್ಯಾರಂಟಿ!
* 4,000ಕ್ಕೂ ಅಧಿಕ ಆಟೋರಿಕ್ಷಾಗಳಿಗೆ ಪ್ರಚಾರ ಚಿತ್ರ, ಬ್ಯಾನರ್ ಹಾಗೂ ಬಂಟಿಂಗ್ಸ್ ಅನ್ನು ನೀಡಲಾಗಿದೆ.

ಇದಲ್ಲದೆ, ವೆಬ್ ಸೈಟ್, ಫೇಸ್ ಬುಕ್, ಯ್ಯೂಟೂಬ್ ಮೂಲಕ ಪ್ರಚಾರ ನಡೆಸಲು ಸ್ವತಃ ರಕ್ಷಿತಾ ಪ್ರೇಮ್ ಮುಂದಾಗಿದ್ದಾರೆ. ಈಗಾಗಲೇ ಶಿವರಾಜ್ ಅವರ ಫ್ಯಾನ್ಸ್ ಪೇಜ್ ನಲ್ಲಿ ಜೋಗಯ್ಯನದ್ದೇ ಮಾತುಕತೆ.

English summary
Hat Trick Hero Shivarajkumar lead movie Jogayya is set to release on 19th August. Director Prem and Producer Rakshitha along with Distributor Srinivas very wisely planned publicity campaign for the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada