»   »  ವಿಷ್ಣು, ಉಪ್ಪಿ ಮತ್ತು ಶ್ರುತಿಗೆ ಗುಲಾಬಿ ಕಳುಹಿಸಿ!

ವಿಷ್ಣು, ಉಪ್ಪಿ ಮತ್ತು ಶ್ರುತಿಗೆ ಗುಲಾಬಿ ಕಳುಹಿಸಿ!

Posted By:
Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್, ಸೂಪರ್ ಸ್ಟಾರ್ ಉಪೇಂದ್ರ ಮತ್ತು ಕಣ್ಣೀರ ಪಾತ್ರಗಳ ಮೂಲಕ ಮನೆಮಾತಾದ ತಾರೆ ಶ್ರುತಿ ಸೆಪ್ಟೆಂಬರ್ 18ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕನ್ನಡ ತಾರೆಗಳಿಗೆ ಅಭಿನಂದನೆಗಳನ್ನು ತಿಳಿಸಲು ಅವರ ಮನೆಗೇ ಹೋಗಬೇಕೆಂದೇನು ಇಲ್ಲ. ದಟ್ಸ್ ಕನ್ನಡ ಮೂಲಕ ನಿಮ್ಮ ನೆಚ್ಚಿನ ತಾರೆಗಳಿಗೆ ಗುಲಾಬಿ ಹೂವಿನ ಮೂಲಕ ಅಭಿನಂದನೆಗಳನ್ನು ತಿಳಿಸಬಹುದು!

ಉಪ್ಪಿಗೆ ನಲವತ್ತೆರಡಾಯ್ತು!
ಸಾಕಷ್ಟು ಸೈಕಲ್ ತುಳಿದು, ಗಿಮಿಕ್ ಮಾಡಿ, ತರ್ಲೆ ಮಾಡಿ, ಬುದ್ಧಿ ಖರ್ಚು ಮಾಡಿ, ಇನ್ನೂ ಏನೇನೋ ಮಾಡಿ ಕೊನೆಗೂ ಉಪೇಂದ್ರ ಸೂಪರ್ ಸ್ಟಾರ್ ಆದರು. ಆಮೇಲೆ ಏನಾದರು ಎಂಬುದು ನಿಮಗೆ ಗೊತ್ತಿದೆ. ಹುಟ್ಟುಹಬ್ಬಕ್ಕೆ ರಜನಿ ಬಿಡುಗಡೆಯಾಗಿದೆ. ಹಾಗೆಯೇ ಭೀಮೂಸ್ ಬ್ಯಾಂಗ್ ಬ್ಯಾಂಗ್ ಚಿತ್ರ ಶೀಘ್ರವಾಗಿ ತೆರೆಕಾಣಲಿ ಎಂದು ಆಶಿಸೋಣ. ಇಂದು(ಸೆ.18) ಉಪೇಂದ್ರರ 42ನೇ ಹುಟ್ಟುಹಬ್ಬ. ನಿಮ್ಮ ನೆಚ್ಚಿನ ನಟನಿಗೆ ಮುಂಗಡವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಇನ್ನೇಕೆ ತಡ.

ಬಳ್ಳಾರಿ ನಾಗನಾಗಿ ವಿಷ್ಣು
'ಆಪ್ತರಕ್ಷಕ' ವಿಷ್ಣು(60) ಪ್ರತಿವರ್ಷದಂತೆ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೋಳ್ಳಲಿದ್ದಾರೆ. ವಿಷ್ಣು ಅಭಿಮಾನಿಗಳು ಸ್ವಯಂಪ್ರೇರಿತ ರಕ್ತದಾನ ಮುಂತಾದ ಕಾರ್ಯಕ್ರಮಗಳ ಮೂಲಕ ಹಲವಾರು ಸಮಾಜ ಸೇವೆ ಕಾರ್ಯಗಳನ್ನು ಮಾಡುತ್ತಾರೆ. ಬಳ್ಳಾರಿನಾಗ, ಸ್ಕೂಲ್ ಮಾಸ್ಟರ್ ಮತ್ತು ಆಪ್ತರಕ್ಷಕ ಚಿತ್ರಗಳು ಬಿಡುಗಡೆಯಾಗಬೇಕಿವೆ. ಹಾಗೆಯೇ ನಿಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಸಂಭ್ರಮಗಳನ್ನು ತಿಳಿಸಲು ಮರೆಯದಿರಿ.

ಗುಲಾಬಿ ಕೊಡಲು ಮರೆಯದಿರಿ
ತಮ್ಮ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟಿ ಶ್ರುತಿ(35). ತಮ್ಮ ಕರುಳು ಚಿವುಟುವ ಪಾತ್ರಗಳ ಮೂಲಕ ಕಣ್ಣೀರ ತಾಯಿ ಎಂಬ ಬಿರುದಿಗೂ ಪಾತ್ರರಾದರು. ಹುಟ್ಟಿದ್ದು ಬೆಂಗಳೂರಿನಲ್ಲಿ ಬೆಳೆದದ್ದು ಹೊಳೆನರಸೀಪುರದಲ್ಲಿ. ಅಪ್ಪ ಅಮ್ಮನೊಂದಿಗೆ ನಾಟಕಗಳನ್ನು ಮಾಡುತ್ತಾ ಊರೂರು ಅಲೆಯುತ್ತಿದ್ದ ಶ್ರುತಿಗೆ ಅಭಿನಯ ಅನ್ನುವುದು ರಕ್ತದಲ್ಲೇ ಬಂದಿತ್ತು. ಶ್ರುತಿ ಹುಟ್ಟುಹಬ್ಬಕ್ಕೆ ಚಕ್ರವರ್ತಿ ಒಲವಿನ ಉಡುಗೊರೆ ಕೊಡಲು ತೀರ್ಮಾನಿಸಿದ್ದಾರೆ. ದುಂಡು ಮುಖದ ಸಹಜ ನಗುವಿನ ಸುಂದರಿಗೆ ಹುಟ್ಟುಹಬ್ಬದ ಸಂಭ್ರಮಗಳನ್ನು ತಿಳಿಸಿರಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada