»   »  ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ

ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada
ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ಕಿಂಗ್, ವರನಟ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ಅಪ್ಪು ಬಗೆಗೆ ಕನ್ನಡ ಚಿತ್ರೋದ್ಯಮ ಭಾರೀ ಭರವಸೆ ಇರಿಸಿಕೊಂಡಿದೆ.

ಹೇಳಿಕೇಳಿ ಇದು ಹೊಸಬರ ಜಮಾನ. ಹೊಸಮುಖಗಳು ಯಶಸ್ಸು ಕಾಣುತ್ತಿರುವ ಈ ಹೊತ್ತು , ರಾಜ್‌ ಬಳಗದ ರಕ್ಷಾ ವರ್ಚಸ್ಸಿನೊಂದಿಗೆ ಕಣಕ್ಕಿಳಿದ ಅಪ್ಪುಗೆ ಯಶಸ್ಸು ಎನ್ನುವುದು ಒಂದು ಸವಾಲು ಅನ್ನಿಸಲೇ ಇಲ್ಲ. ಅವರ ನಟನೆಯ 11ಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವನ್ನು ಆಚರಿಸಿಕೊಂಡಿವೆ. ಚಿತ್ರವೊಂದಕ್ಕೆ 2 ಕೋಟಿ ರುಗಳಿಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಪುನೀತ್ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.

ಪ್ರಸ್ತುತ 'ರಾಮ್' ಮತ್ತು 'ರಾಜ್' ಚಿತ್ರಗಳಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಬರುತ್ತಿರುವ 'ರಾಜ್' ಚಿತ್ರಹಲವಾರು ಭರವಸೆಗಳನ್ನು ಹುಟ್ಟುಹಾಕಿದೆ. ಪುನೀತ್ ಕನ್ನಡ ಚಿತ್ರರಂಗದಲ್ಲಿ ಹೀಗೇ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ನೋಡುವ, ಸದಭಿರುಚಿಯ ಚಿತ್ರಗಳನ್ನು ನೀಡಲಿ ಎಂದು ದಟ್ಸ್ ಕನ್ನಡ ಹಾರೈಸುತ್ತದೆ. ನಿಮ್ಮ ನೆಚ್ಚಿನ ನಟ ಪುನೀತ್ ಗೆ ಶುಭಾಶಯಗಳನ್ನು ತಿಳಿಸಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ
ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ಪುನೀತ್ ಅಭಿಮಾನಿಗಳ ಸಂಘಕ್ಕೆ ವಿದ್ಯುಕ್ತಚಾಲನೆ
ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada