»   » ಕಾಡಬೆಳದಿಂಗಳು,ದಾಟು ಮತ್ತು ಮೊಗ್ಗಿನ ಜಡೆಗೆ ಮನ್ನಣೆ

ಕಾಡಬೆಳದಿಂಗಳು,ದಾಟು ಮತ್ತು ಮೊಗ್ಗಿನ ಜಡೆಗೆ ಮನ್ನಣೆ

Posted By: Staff
Subscribe to Filmibeat Kannada

ಬೆಂಗಳೂರು, ಅ.17 : 38ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮ ವಿಭಾಗಕ್ಕೆ ಕನ್ನಡ ಮೂರು ಚಿತ್ರಗಳು ಆಯ್ಕೆಯಾಗಿವೆ. ಚಿತ್ರೋತ್ಸವವು ನ.23ರಿಂದ ಡಿ.3ರವರೆಗೆ ಗೋವಾದಲ್ಲಿ ನಡೆಯಲಿದೆ.

'ಕಾಡ ಬೆಳದಿಂಗಳು", 'ದಾಟು" ಮತ್ತು 'ಮೊಗ್ಗಿನ ಜಡೆ" ಕ್ರಮವಾಗಿ ಬಿ.ಎಸ್. ಲಿಂಗದೇವರು, ಕೆ. ಶಿವರುದ್ರಯ್ಯ ಮತ್ತು ಪಿ.ಆರ್. ರಾಮದಾಸ್ ನಾಯ್ಡು ನಿರ್ದೇಶನದ ಚಿತ್ರಗಳು ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ. ಬೆಂಗಳೂರು ಕಂಪನಿ ನಿರ್ಮಿಸಿದ್ದ 'ಕಾಡ ಬೆಳದಿಂಗಳು" ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಜೋಗಿ ಮತ್ತು ಉದಯ ಮರಕಿಣಿ ರಚಿಸಿದ್ದರು. 'ಮೊಗ್ಗಿನ ಜಡೆ"ಯನ್ನು ರಾಮದಾಸ್ ನಾಯ್ಡು ಅವರೇ ನಿರ್ಮಿಸಿದ್ದರು. ಶಿವರುದ್ರಯ್ಯ ನಿರ್ದೇಶನದ 'ದಾಟು" ರಾಜ್ಯ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿತ್ತು.

ಲಿಂಗದೇವರು ನಿರ್ದೇಶನದ 'ಮೌನಿ" ಮತ್ತು ರಾಮದಾಸ ನಾಯ್ಡು ನಿರ್ದೇಶನದ 'ಪ್ರವಾಹ" ಚಿತ್ರಗಳು ಈ ಹಿಂದಿನ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದ್ದವು.

(ದಟ್ಸ್‌ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada