»   » ಜೋಗಯ್ಯ ಮುಹೂರ್ತಕ್ಕೆ ಅಮೀರ್ ಖಾನ್, ಚಿರಂಜೀವಿ

ಜೋಗಯ್ಯ ಮುಹೂರ್ತಕ್ಕೆ ಅಮೀರ್ ಖಾನ್, ಚಿರಂಜೀವಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 100ನೇ ಚಿತ್ರ 'ಜೋಗಯ್ಯ'ನಿಗೆ ಕಡೆಗೂ ಮುಹೂರ್ತ ಫಿಕ್ಸ್ ಆಗಿದೆ. ಜೋಗಯ್ಯ ಚಿತ್ರ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಸೆಟ್ಟೇರಲಿದೆ. ಚಿತ್ರದ ಆರಂಭಕ್ಕೆ ಹಲವು ಖ್ಯಾತನಾಮರು ಆಗಮಿಸಲಿದ್ದಾರೆ ಎಂದು ಜೋಗಯ್ಯ ಚಿತ್ರದ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ಅಮೀರ್ ಖಾನ್, ಚಿರಂಜೀವಿ, ಮಮ್ಮೂಟ್ಟಿ, ಸೂರ್ಯ ಹಾಗೂ ವಿಜಯ್(ತಮಿಳು) ಅವರನ್ನು ಆಹ್ವಾನಿಸಲಾಗಿದೆ . ಅವರೆಲ್ಲರೂ ಜೋಗಯ್ಯನಿಗೆ ಶುಭ ಕೋರಲಿದ್ದಾರೆ. ಹಲವು ರಾಜಕಾರಣಿಗಳು ಜೋಗಯ್ಯ ಮುಹೂರ್ತಕ್ಕೆ ಆಗಮಿಸಲಿದ್ದಾರೆ ಎಂದು ಪ್ರೇಮ್ ತಿಳಿಸಿದ್ದಾರೆ. ಚಿತ್ರದ ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರೇಮ್ ಮತ್ತು ಚಿತ್ರದ ನಿರ್ಮಾಪಕಿ ರಕ್ಷಿತಾ ಬೊಂಬಾಟಾಗಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಅಂದ್ರೆ ಜುಲೈ 12ರಂದು ಜೋಗಯ್ಯ ಚಿತ್ರೀಕರಣಕ್ಕೆ ಅದ್ದೂರಿಯಾಗಿ ಚಾಲನೆ ಸಿಗಲಿದೆ. ಶಿವಣ್ಣನ 100ನೇ ಚಿತ್ರ ಎಂಬ ಖ್ಯಾತಿಗೆ ಪಾತ್ರವಾದ ಜೋಗಯ್ಯನನ್ನು 300 ಕೇಂದ್ರಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮ್ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada