For Quick Alerts
  ALLOW NOTIFICATIONS  
  For Daily Alerts

  'ಲೂಸ್ ಮಾದ' ಎಂದೇ ಕರೆಯಿರಿ ಎಂದ ಯೋಗೇಶ್

  |

  "ನಾನು ಲೂಸ್ ಮಾದನಾಗೇ ಇರ್ತೀನಿ" ಇದು ಲೂಸ್ ಮಾದ ಅಲಿಯಾಸ್ ಯೋಗೇಶ್ ಹೇಳಿದ ಮಾತು. ಕಾರಣ ಯೋಗೇಶ್ ಕರ್ನಾಟಕದಲ್ಲಿ ಮನೆಮಾತಾಗಿದ್ದು 'ಲೂಸ್ ಮಾದ' ಎಂಬ ಹೆಸರಿನಿಂದಲೇ. ಇದೀಗ ಕಲಾವಿದನಾಗಿ ಸಾಕಷ್ಟು ಬೆಳೆದಿರುವ ಯೋಗಿಯ ಸಿದ್ಲಿಂಗು ಸಿನಿಮಾ ಸಾಕಷ್ಟು ಜನಪ್ರಿಯವಾಗಿದೆ.

  "ಇನ್ನುಮುಂದೆ ನಿಮ್ಮನ್ನು ಸಿದ್ಲಿಂಗು ಯೋಗಿ ಎಂದು ಕರೆಯಬಹುದೇ?" ಎಂಬ ಪ್ರಶ್ನೆಗೆ ಯೋಗಿ ಇಲ್ಲ, ಕರ್ನಾಟಕದ ಜನತೆ ನನ್ನನ್ನು ದುನಿಯಾ ಚಿತ್ರದ 'ಲೂಸ್ ಮಾದ' ಪಾತ್ರದ ಮೂಲಕ ಗುರುತಿಸಿದ್ದಾರೆ, ಪ್ರೀತಿಸಿದ್ದಾರೆ. ಮುಂದೆ ಕೂಡ ನನ್ನನ್ನು ಲೂಸ್ ಮಾದ ಎಂದೇ ಕರೆಯಬಹುದು. ಯಾರಿಗಾದರೂ ಮುಜುಗರವಾದರೆ 'ಸಿದ್ಲಿಂಗು' ಎಂದು ಕರೆಯಿರಿ "ಎಂದಿದ್ದಾರೆ.

  ದುನಿಯಾ ಚಿತ್ರ ಮೂಲಕ ವಿಜಯ್ ದುನಿಯಾ ವಿಜಯ್ ಆದರು. ನಿರ್ದೆಶಕ ಸೂರಿ ದುನಿಯಾ ಸೂರಿ ಆಗಿ ಬದಲಾದರು. ಆದರೆ ಯೋಗೇಶ್ ಮಾತ್ರ ಪಾತ್ರದ ಹೆಸರಿನ ಮೂಲಕ ಮನೆಮಾತಾದರು. ದುನಿಯಾ ನಂತರ ಯೋಗೇಶ್, ಅಂಬಾರಿ, ಯಕ್ಷ, ಅಲೆಮಾರಿ, ಈಗ ಸಿದ್ದಿಂಗು ಹೀಗೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡರೂ ಲೂಸ್ ಮಾದನಾಗೇ ಉಳಿದಿದ್ದಾರೆ, ಅದನ್ನೇ ಇಷ್ಟಪಡುತ್ತಾರೆ ಎಂಬುದು ಸ್ಪಷ್ಟವಾದಂತಾಯ್ತು. (ಒನ್ ಇಂಡಿಯಾ ಕನ್ನಡ )

  English summary
  Actor Loose Mada alias Yogesh likes Nickname Loose Mada only. He does not like name Sidlingu, even if it became popular.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X