For Quick Alerts
  ALLOW NOTIFICATIONS  
  For Daily Alerts

  ಮೆಲ್ಲಮೆಲ್ಲನೆ ಮೇಲೇರಿದ ಮಲೆನಾಡ ಮಲ್ಲಿಗೆ ದೀಪಾ

  |

  ನಟಿ ದೀಪಾ ಸನ್ನಿಧಿ ವೃತ್ತಿಜೀವನದಲ್ಲಿ ಮೆಲ್ಲಮೆಲ್ಲನೆ ಮೇಲೇರುತ್ತಿದ್ದಾರೆ. ಸಾರಥಿ ಹಾಗೂ ಪರಮಾತ್ಮ ಚಿತ್ರಗಳ ನಂತರ ದೀಪಾ ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಪ್ರೀತಮ್ ಗುಬ್ಬಿ ನಿರ್ದೇಶನದ 'ಜಾನೂ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ನಟಿಸಿದ ಮೊದಲ ಚಿತ್ರ ಸಾರಥಿಯಾದರೂ ಮೊದಲು ಬಿಡುಗಡೆಯಾಗಿದ್ದು ಪರಮಾತ್ಮ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಜಯಭೇರಿ ಭಾರಿಸಿವೆ. ಜೊತೆಗೆ ಸಾರಥಿ 2011ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.

  ಈ ಎಲ್ಲಾ ಬೆಳವಣಿಗೆಗಳಿಂದ ಸಹಜವಾಗಿಯೇ ಚಿಕ್ಕಮಗಳೂರು, ಮಲೆನಾಡಿನ ಹುಡುಗಿ ದೀಪಾ ಸನ್ನಿಧಿಗೆ ಅವಕಾಶಗಳ ಮಹಾಪೂರವೇ ಹರಿದುಬಂದಿದೆ. ಆದರೆ ಎಲ್ಲಾ ಚಿತ್ರಗಳನ್ನೂ ಒಪ್ಪೊಕೊಳ್ಳದೇ ಸಾಕಷ್ಟು ಅಳೆದು, ತೂಗಿ ಒಪ್ಪಿಕೊಂಡರುವ ದೀಪಾ, ನಿಧಾನವಾಗಿ ಆದರೆ ಭದ್ರವಾಗಿ ಸ್ಯಾಂಡಲ್ ವುಡ್ ನಲ್ಲಿ ನೆಲೆನಿಲ್ಲುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

  ಜಾನೂ ಚಿತ್ರ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿದೆ. ತನಗೆ ಗೊತ್ತಿಲ್ಲದ ಉತ್ತರಕರ್ನಾಟಕದ ಭಾಷೆಯನ್ನು ಕಲಿತು, ಮಾತನಾಡಿ ವೃತ್ತಿನಿಷ್ಠತೆ ಮೆರೆದಿದ್ದಾರೆ ದೀಪಾ. ಅಷ್ಟೇ ಅಲ್ಲ, ಇದೀಗ ಶಶಾಂಕ್ ನಿರ್ದೇಶನ ಹಾಗೂ ಸುದೀಪ್ ನಾಯಕತ್ವದ 'ಬಚ್ಚನ್' ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬಳಾಗಿ ದೀಪಾ ಆಯ್ಕೆಯಾಗಿದ್ದಾಳೆ. ದೀಪಾ ಅಳೆದು, ತೂಗಿ ಮೇಲೇರುತ್ತಿರುವ ಒಂದೊಂದೆ ಹೆಜ್ಜೆ ನೋಡಿ, ಈಕೆ ಭವಿಷ್ಯದ ಕನ್ನಡದ ತಾರೆ ಆಗಲಿದ್ದಾರೆ ಎನ್ನುತ್ತಿದೆ ಗಾಂಧಿನಗರ. (ಒನ್ ಒಂಡಿಯಾ ಕನ್ನಡ)

  English summary
  Actress Deepa Sannidhi Steps Up in Sandalwood one by one movies. She has learnt North Karnataka Language in her upcoming movie 'Janoo' with Rocking Star Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X