»   » ಕಾವೇರಿ ಮಡಿಲಲ್ಲಿ 'ಕೃಷ್ಣನ್ ಲವ್ ಸ್ಟೊರಿ'

ಕಾವೇರಿ ಮಡಿಲಲ್ಲಿ 'ಕೃಷ್ಣನ್ ಲವ್ ಸ್ಟೊರಿ'

Posted By:
Subscribe to Filmibeat Kannada

ಕರ್ನಾಟಕದ ಜೀವನದಿ ಕಾವೇರಿ. ಈ ನದಿ ಹರಿಯುವ ಕಡೆ ಹಸಿರಿನ ಸಿರಿ. ಪ್ರಸಿದ್ಧ ಜಲಪಾತವೆಂದೂ ಖ್ಯಾತಿ ಪಡೆದಿರುವ, ಪ್ರವಾಸಿಗರ ಸ್ವರ್ಗವೆನಿಸಿರುವ ಹೊಗೇನಕಲ್ ಜಲಪಾತದಲ್ಲಿ ಕಾವೇರಿಯ ವೈಭವ ವರ್ಣಿಸಲು ಅಸಾಧ್ಯ. ಇಂಥ ರಮಣೀಯ ಪರಿಸರದಲ್ಲಿ ಅಜಯ್ ಹಾಗೂ ರಾಧಿಕಾಪಂಡಿತ್ ಜೋಡಿಯ 'ಕೃಷ್ಣನ್ ಲವ್ ಸ್ಟೊರಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಕರ್ನಾಟಕ ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದ ನಿರ್ದೇಶಕ ಶಶಾಂಕ್. ಚಿತ್ರಕ್ಕೆ ಕಥೆ, ಚಿತ್ರಕಥೆ ರಚನೆ ಕೂಡ ಇವರದೆ. ಹಿಂದೆ ಇವರು ನಿರ್ದೇಶಿಸಿದ ಎರಡು ಚಿತ್ರಗಳು ಯಶಸ್ಸು ಕಂಡಿತ್ತು.ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ವಿ.ಶ್ರೀಧರ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ 'ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada