»   »  ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

Subscribe to Filmibeat Kannada

*ಜಯಂತಿ

Chetan
ಚೇತನ್ ಯಾಕಿಷ್ಟು ನೀವು ಗಂಭೀರ? ಪ್ರಶ್ನೆ ಕೇಳಿಸಿಕೊಂಡ ಚೇತನ್ ಇನ್ನೂ ಗಂಭೀರರಾದರು. ಈ ಪ್ರಶ್ನೆಗೆ ಕಾರಣ ಬಿರುಗಾಳಿ ಚಿತ್ರದಲ್ಲಿನ ಅವರ ಅಭಿನಯ. ಇಡೀ ಸಿನಿಮಾದಲ್ಲಿ ನಗು ಮರೆತವರಂತೆ ಚೇತನ್ ಕಾಣಿಸಿಕೊಂಡಿದ್ದಾರೆ. ಇಬ್ಬರು ನಾಯಕಿಯರು ತಂಗಾಳಿಯಂತೆ ಸುಳಿದಾಡಿದರೂ ಚೇತನ್ ಅವರದ್ದು ವಿಶ್ವಾಮಿತ್ರನ ಪೋಸು. ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

ಚೇತನ್ ಅಮೆರಿಕದಲ್ಲಿ ಓದಿಕೊಂಡ, ಓಡಾಡಿಕೊಂಡಿದ್ದ ಹುಡುಗ. ಲೋಕ ಸುತ್ತಿದ್ದಕ್ಕೆ ಈ ಗಾಂಭೀರ್ಯವಾ? ವಿಪರೀತ ಓದು ನಗುವನ್ನು ಕಸಿದುಕೊಂಡಿತಾ? ಇವು ಉಪ ಪ್ರಶ್ನೆಗಳು.ಆ ದಿನಗಳು ಹಾಗೂ ಬಿರುಗಾಳಿ ಚಿತ್ರದ ಸುದ್ದಿಗೋಷ್ಠಿಗಳಲ್ಲೂ ಚೇತನ್ ತೀರಾ ಗಂಭೀರವಾಗಿ ಕಾಣಿಸಿಕೊಂಡಿದ್ದರು. ನಾಯಕರ ಚೆಲ್ಲುತನವಾಗಲೀ, ಪೆದ್ದುತನವಾಗಲೀ ಅವರ ನಡೆನುಡಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂಥ ನಡವಳಿಕೆ ಅಪರೂಪ. ಅವರ ಮಾತುಗಳನ್ನು ಕೇಳುತ್ತಿದ್ದರೆ ಕೆಲವೊಮ್ಮೆ ವಿಷ್ಣುವರ್ಧನ್ ನೆನಪಾಗುವುದಂಟು. ಆದರೆ, ವಿಷ್ಣು ವೇದಾಂತ ಹರೆಯದ ಹುಡುಗನಿಗೆ ಬೇಕಾ?

ಮಾತು ಮರೆತವರಂತೆ ಕಂಡ ಚೇತನರನ್ನು ಮತ್ತೆ ಕೆಣಕಿದೆವು ಏಕಿಷ್ಟು ಗಂಭೀರ? ಇಲ್ಲಪ್ಪ ಎಂದರು ಚೇತನ್. ನನಗೆ ಈವರೆಗೆ ಯಾರೂ ಈ ರೀತಿ ಕೇಳಿಲ್ಲ ಎಂದರು. ಅಂದಹಾಗೆ, ಚೇತನ್‌ರ ಮುಂದಿನ ಚಿತ್ರದ ಹೆಸರು ಸೂರ್ಯಕಾಂತಿ. ಆ ದಿನಗಳು ನಿರ್ದೇಶಿಸಿದ್ದ ಚೈತನ್ಯ ಸೂರ್ಯಕಾಂತಿಯ ಸಾರಥ್ಯ ವಹಿಸಿದ್ದಾರೆ. ಸೂರ್ಯನತ್ತ ಹೊರಳುತ್ತಲೇ ನಗುವ ಹೂವು ಸೂರ್ಯಕಾಂತಿ. ಆ ನಗೆಕಾಂತಿ ಹೂಸಂಗದಲ್ಲಿ ಚೇತನ್‌ಗೂ ಕೊಂಚ ಸಿದ್ಧಿಸಲಿ.

ಪೂರಕ ಓದಿಗೆ
ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ
ಆ ದಿನಗಳು ಚೇತನ್ ರ ಬಿರುಗಾಳಿ ಟ್ರೈಲರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada