Don't Miss!
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿಂಗಾರಿ ಸಂತೋಷಕೂಟಕ್ಕೆ ನಿರ್ಮಾಪಕರೇಕೆ ಬಂದಿಲ್ಲ?
ಹಾಗಾದರೆ ನಿಜವಾಗಿ ನಡೆದಿದ್ದೇನು? ಚಿತ್ರವನ್ನು ಮಾರಾಟ ಮಾಡಿದ ಮೇಲೆ ಚಿತ್ರದ ಪ್ರಚಾರ ಕಾರ್ಯವನ್ನು ನಿರ್ಮಾಪಕರು ಹಾಗೂ ವಿತರಕರು ಹೇಗೆ ಮಾಡಬೇಕೆಂದು ಚರ್ಚಿಸಿದ್ದರು? ಅವರ ಮಧ್ಯೆ ಯಾಕೆ ಭಿನ್ನಾಭಿಪ್ರಾಯ ಬಂತು? ನಿರ್ಮಾಪಕರು ಹಾಗೂ ದರ್ಶನ್ ಮಧ್ಯೆ ಮನಸ್ತಾಪ ಬಂದಿದ್ದು ಯಾವಾಗ? ಚಿಂಗಾರಿಗೂ ಮೊದಲು ಮಹಾದೇವ್, ಮನು ನಿರ್ಮಿಸಿದ್ದ 'ಶಿಶಿರ' ಚಿತ್ರ ಬಾಕ್ಸಾ ಆಫೀಸ್ ನಲ್ಲಿ ಸೋತರೂ ಅವರ ಪ್ರಚಾರ ಕಾರ್ಯ ಇಡೀ ಚಿತ್ರರಂಗದ ಗಮನಸೆಳೆದಿತ್ತು. ಚಿಂಗಾರಿಯ ವಿಷಯದಲ್ಲಿಯೂ ಆಡಿಯೋ ಬಿಡುಗಡೆವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಹೀಗೇಕಾಯಿತು?
ದರ್ಶನ್ ಹಾಗು ಚಿಂಗಾರಿ ನಿರ್ಮಾಪಕ ನಡುವೆ ಮನಸ್ತಾಪ ನಡೆದಿದೆ ಎಂದರೆ ನಂಬಲಿಕ್ಕೆ ಸ್ವಲ್ಪ ಕಷ್ಟ. ಕಾರಣ ದರ್ಶನ್ ವೈಯಕ್ತಿಕ ಸಮಸ್ಯೆಯಿಂದ ಜೈಲಿನಲ್ಲಿದ್ದಾಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಕೇವಲ ಸಿನಿಮಾ ಪ್ರೀತಿಯಲ್ಲದೇ ದರ್ಶನ್ ಮೇಲಿನ ಪ್ರೀತಿಯೂ ಕಾರಣ ಎಂಬುದನ್ನು ಆಗ ಎಲ್ಲರೂ ಮಾತನಾಡುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಇಬ್ಬರಲ್ಲಿ ಮನಸ್ತಾಪ ಯಾಕಾಗಿದೆ? ಈ ವಿಷಯವೀಗ ಯಾಕೆ ಪ್ರಚಾರ ಪಡೆಯುತ್ತಿದೆ?
ನಿರ್ಮಾಪಕರು ಹಾಗೂ ದರ್ಶನ್ ಇಬ್ಬರೂ ಮನಸ್ತಾಪ ಆಗಿದ್ದು ನಿಜ ಎಂದಿದ್ದಾರೆ. ದರ್ಶನ್ ಹೇಳಿಕೆಗಳು ಮಾದ್ಯಮದಲ್ಲಿ ಸುದ್ದಿಯಾಗಿವೆ. ಆದರೆ ವಿತರಕ ಪ್ರಸಾದ್ ಹಾಗೂ ಚಿಂಗಾರಿ ನಿರ್ಮಾಪಕ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ ಎಂದು ಸ್ವತಃ ಮನು ಅವರೇ ಹೇಳಿದ್ದಾರೆ. ಆದರೆ ಸತ್ಯವೇನೆಂದು ಅವರಿಬ್ಬರಿಗೆ ಮಾತ್ರ ಗೊತ್ತು. ಹೇಳಲೇಬೇಕಾದ ವೇಳೆಯಲ್ಲಿ ಹೇಳಲಾಗದಿದ್ದರೂ ಈ ಕುರಿತು ಇಬ್ಬರೂ ಪರಸ್ಪರ ಚರ್ಚಿಸಿ ಅನಾವಶ್ಯಕ ವದಂತಿ ಹಬ್ಬದಂತೆ ನೋಡಿಕೊಂಡರೆ ಒಳ್ಳೆಯದು. ನಿರ್ಮಾಪಕ ಹಾಗೂ ನಟ ಇಬ್ಬರೂ ಚಿತ್ರರಂಗದ ಆಸ್ತಿಗಳು ಎಂಬುದನ್ನು ಯಾರೂ ಮರೆಯಲಾರರು.