»   » ಕ್ರೇಜಿಸ್ಟಾರ್ ರವಿಚಂದ್ರನ್ ರಾಜಕೀಯ ಸೇರಲಿದ್ದಾರೆಯೇ?

ಕ್ರೇಜಿಸ್ಟಾರ್ ರವಿಚಂದ್ರನ್ ರಾಜಕೀಯ ಸೇರಲಿದ್ದಾರೆಯೇ?

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ರಾಜಕೀಯಕ್ಕೆ ಹೋಗುತ್ತಾರಾ? ಈ ಪ್ರಶ್ನೆ ಸದ್ಯಕ್ಕೆ ಖಂಡಿತ ಪ್ರಸ್ತುತ. ಎಕೆಂದರೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ತುಂಬಾ ಮಂದಿ ಸಿನಿಮಾ ತಾರೆಗಳು ರಾಜಕೀಯ ಕ್ಷೇತ್ರಕ್ಕೆ ಧುಮುಕುತ್ತಿದ್ದಾರೆ. ಸಿನಿಮಾ ತಾರೆಗಳಿಗೂ ರಾಜಕೀಯಕ್ಕೂ ಅತಿ ಹತ್ತಿರದ ನಂಟು ಎನ್ನುವಂತಾಗಿದೆ. ಆದರೆ ರವಿಚಂದ್ರನ್ ರಾಜಕೀಯ ಸೇರುತ್ತಾರಾ?
ಉತ್ತರವನ್ನು ಅವರು ತಮ್ಮ ಎಂದಿನ ಶೈಲಿಯಲ್ಲಿ ನಿಖರವಾಗಿ ಹೇಳಿದ್ದಾರೆ.

"ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ. ನನ್ನ ಸ್ವಭಾವ ಇದ್ದದ್ದನ್ನು, ಕಂಡದ್ದನ್ನು ನೇರವಾಗಿ ಹೇಳಿಬಿಡೋದು. ನಾನು ಮತ್ತೊಬ್ಬರು ಹೇಳಿಕೊಟ್ಟಿದ್ದನ್ನು ಹೇಳುವ ಮನುಷ್ಯ ಅಲ್ಲ, ನನಗೇನು ಅನ್ನಿಸುತ್ತೋ ಅದನ್ನು ಹೇಳುತ್ತೇನೆ, ಇಲ್ಲಾಂದ್ರೆ ಸುಮ್ಮನಿರುತ್ತೇನೆ. ರಾಜಕೀಯಕ್ಕೆ ಇದ್ಯಾವುದೂ ಸೆಟ್ ಆಗೋದೇ ಇಲ್ಲ. ಹಾಗಾಗಿ ನನಗೆ ಅಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಅಂದಮೇಲೆ ನಾನು ಹೋಗಿ ಮಾಡುವುದೇನು?

ನನಗೆ ಹೆಸರು, ಪ್ರಸಿದ್ಧಿ ತಂದುಕೊಟ್ಟ ಸಿನಿಮಾ ಕ್ಷೇತ್ರದಲ್ಲೇ ಇನ್ನೂ ಮಾಡಲು ಸಾಕಷ್ಟು ಕೆಲಸಗಳಿವೆ. ಅದರ ಬಗ್ಗೆ ಯೋಚಿಸುತ್ತೇನೆ ಹೊರತೂ ರಾಜಕೀಯ ಸೇರುವುದಿಲ್ಲ. ನಾನೀಗ ಕೇವಲ ನನ್ನ ನಿರ್ದೇಶನದ ಚಿತ್ರಗಳಲ್ಲಲ್ಲದೇ ಇತರರು ನಿರ್ದೆಶಿಸುತ್ತಿರುವ ಚಿತ್ರಗಳಲ್ಲೂ ನಟಿಸುತ್ತಿದ್ದೇನೆ. ಇನ್ನೊಬ್ಬರ ನಿರ್ದೇಶನದಲ್ಲಿ ನಾನು ಕೇವಲ ನಟನಾಗಿದ್ದು ಹೇಳಿದಷ್ಟು ಮಾಡಿಮುಗಿಸಿ ಬರುತ್ತೇನೆ. ಯಾವುದೇ ಬದಲಾವಣೆ ಬಯಸುವುದಿಲ್ಲ" ಎಂದಿದ್ದಾರೆ ಸದಾ ಕನಸುಗಾರ ರವಿಚಂದ್ರನ್. (ಒನ್ ಇಂಡಿಯಾ ಕನ್ನಡ)

English summary
Kannada Actor, Crazy Star Ravichandran told that he has no interest ti join Politics.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X