twitter
    For Quick Alerts
    ALLOW NOTIFICATIONS  
    For Daily Alerts

    ಕೂರ್ಮಾವತಾರದಲ್ಲಿ ಗಿರೀಶ್ ಕಾಸರವಳ್ಳಿ ಬ್ಯುಸಿ

    By Rajendra
    |

    Girish Kasaravalli
    ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರಾದ ಗಿರೀಶ್ ಕಾಸರವಳ್ಳಿ ಈ ಬಾರಿ ಮತ್ತೊಂದು ವಿಭಿನ್ನ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಕಾದಂಬರಿ ಕುಂ.ವೀರಭದ್ರಪ್ಪ ಅವರ 'ಕೂರ್ಮಾವತಾರ'. ಚಿತ್ರಕ್ಕೂ ಇದೇ ಶೀರ್ಷಿಕೆಯನ್ನಿಡಲಾಗಿದೆ.

    ಕಳೆದ ಆರು ದಶಕದಲ್ಲಿ ಆದಂತಹ ಬದಲಾವಣೆಗಳ ಸುತ್ತ ಕತೆ ಸುತ್ತುತ್ತದೆ. 1986ರಲ್ಲಿ ತೆರೆಕಂಡ 'ತಬರನ ಕಥೆ' ಚಿತ್ರವನ್ನು ನೆನಪಿಸುತ್ತದೆ. ಇಂದಿಗೂ ಗಾಂಧಿ ಎಷ್ಟು ಪ್ರಸ್ತುತ ಎಂಬುದನ್ನು ಕತೆಗೆ ಸೇರಿಸಿದ್ದೇನೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಆತ್ಮವಿಮರ್ಶೆಗೆ ಒಳಗಾಗುತ್ತಾರೆ ಎಂದಿದ್ದಾರೆ ಕಾಸರವಳ್ಳಿ.

    ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣಕತೆ ಆಧಾರವಾಗಿ 'ತಬರನ ಕತೆ' ಚಿತ್ರ ತೆರೆಕಂಡಿತ್ತು. ಈ ಚಿತ್ರ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿತ್ತು. 'ಕೂರ್ಮಾವತಾರ' ಚಿತ್ರವನ್ನು ಬಸಂತಕುಮಾರ್ ಪಾಟೀಲ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ನಾಯಿ ನೆರಳು', 'ಕನಸೆಂಬ ಕುದುರೆಯನೇರಿ' ಚಿತ್ರಗಳನ್ನು ನಿರ್ಮಿಸಿದ್ದರು.

    ಕಾಸರವಳ್ಳಿ ಅವರೊಂದಿಗೆ ಪಾಟೀಲ್ ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಈಗಾಗಲೆ 15 ದಿನಗಳ ಚಿತ್ರೀಕರಣ ಮುಗಿದಿದ್ದು ಅಭಿನಯ ಶಾರದೆ ಜಯಂತಿ ಹಾಗೂ ಶಿಕಾರಿಪುರ ಕೃಷ್ಣಮೂರ್ತಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಎಚ್ ಜಿ ಸೋಮಶೇಖರ ರಾವ್, ಗೋವಾ ದತ್ತು, ವಿಕ್ರಂ ಸೂರಿ ಹಾಗೂ ರಶ್ಮಿ ಉಳಿದ ಪಾತ್ರಧಾರಿಗಳು. (ಒನ್‍ಇಂಡಿಯಾ ಕನ್ನಡ)

    English summary
    Kannada films noted directror Girish Kasaravalli has started shooting for "Koormavathaara", based on a novel written by Kannada writer Kum Veerabhadrappa. This is Patil and Kasarvalli's third film and they have already completed 15 days shoot here. Jayanthi, known as Abhinaya Sharade, plays the lead role along with theatre artist Shikaripura Krishnamurthy.
    Friday, November 18, 2011, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X