»   »  ದರ್ಶನ್ ಹುಟ್ಟುಹಬ್ಬದ ಸವಿಸವಿ ನೆನಪುಗಳು

ದರ್ಶನ್ ಹುಟ್ಟುಹಬ್ಬದ ಸವಿಸವಿ ನೆನಪುಗಳು

Posted By:
Subscribe to Filmibeat Kannada
ಕನ್ನಡ ನಾಯಕ ನಟ ದರ್ಶನ್ ಅವರು ಮೊನ್ನೆ ಸೋಮವಾರ ಬೆಂಗಳೂರಿನಲ್ಲಿ ತಮ್ಮ 32 ನೆ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರು. ಭಾವನಾತ್ಮಕವಾಗಿರಲಿ ಅಥವಾ ಮಚ್ಚು ಲಾಂಗುಗಳನ್ನು ಹಿಡಿದು ಠಳಾಯಿಸುವ ಪಾತ್ರವೇ ಆಗಲೀ ತಮ್ಮ ಪಾತ್ರಗಳಿಗೆ ಜೀವ ತುಂಬುವ ಆಕರ್ಷಕ ನಿಲುವಿನ ನಟನಿಗೆ ಅವರ ಅಭಿಮಾನಿಗಳು, ಜತೆಗಾರ ನಟರು,ನಿರ್ದೇಶಕರು ಅಂದು ಶುಭ ಕೋರಿದರು.

ಹೋಟೆಲು, ರೆಸಾರ್ಟು ಅಥವಾ ಶೂಟಿಂಗ್ ತಾಣದಲ್ಲೆ ಕೆಲವು ನಟರು ಹುಟ್ಟುಹಬ್ಬ ಆಚರಿಸಿಕೊಳ್ಳುವುದುಂಟು. ಆದರೆ, ದರ್ಶನ್ ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲಿ ಬಂಧು ಬಾಂಧವರೊಡಗೂಡಿ ಹೋಮ ಹವನ ನೆರವೇರಿಸಿ ಅಭಿಮಾನಿ ಬಳಗಕ್ಕೆ ಸ್ವತಃ ಕೇಕ್ ತಿನ್ನಿಸಿ ಪುಳಕಗೊಳಿಸಿದರು. ಅಂದು ಸೋಮವಾರ ಬೆಳಗ್ಗೆ ಮಹಾಲಕ್ಷ್ಮಿ ಲೇಔಟಿನಲ್ಲಿ ಬಾಸ್ ಚಿತ್ರದ ಒಂದು ಸ್ಟಂಟ್ ಶಾಟ್ ಪೂರೈಸಿ ಮನೆಗೆ ಮರಳಿ ಬಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ತಲ್ಲೀನರಾದರು.

ನಿರ್ದೇಶಕ ಎಂ.ಡಿ.ಶ್ರೀಧರ್, ದಿನಕರ್ ತೂಗುದೀಪ್, ತಾರಕೇಶ್ ಪಟೇಲ್ ಅವರಲ್ಲದೆ ಕನ್ನಡ ಚಲನಚಿತ್ರರಂಗದ ಅನೇಕ ಕಲಾವಿದ ತಂತ್ರಜ್ಞರು ಆಗಮಿಸಿ ದರ್ಶನ್ ಅವರಿಗೆ ಶುಭ ಕೋರಿದರು. ಅಂದಹಾಗೆ, ದರ್ಶನ್ 31 ತುಂಬಿಕೊಂಡು 32 ಕ್ಕೆ ಬಿದ್ದರು. ನಿರ್ಮಾಣದ ವಿವಿಧ ಹಂತಗಳಲ್ಲಿರುವ ದರ್ಶನ್ ಅವರು ನಟಿಸುತ್ತಿರುವ ಚಿತ್ರಗಳೆಂದರೆ ಬಾಸ್, ಅಭಯ್, ಪೊರ್ಕಿ ಮತ್ತು ಭೀಮಾ. ಅಭಯ್ ಚಿತ್ರ ನಿರ್ಮಾಣ ಪೂರೈಸಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!
ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್
ಅಚ್ಚ ಹೊಸ ಕಾಪಿಯೊಂದಿಗೆ ಕರಿಯ ಮತ್ತೆ ತೆರೆಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada