twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯ ಎಂಟ್ರಿಗೆ ಈಡುಗಾಯಿ ಒಡೆದ ಕೆ ಮಂಜು

    By Rajendra
    |

    Kannada producer K Manju
    ಕನ್ನಡ ಚಲನಚಿತ್ರಗಳ ಅಂಜದಗಂಡು ನಿರ್ಮಾಪಕ ಕೊಬ್ರಿ ಮಂಜಣ್ಣನ ರಾಜಕೀಯ ದಿನಗಳು ಇನ್ನೇನು ಶುರುವಾಗಲಿವೆ. ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಮಂಜಣ್ಣ ಮೌನ ಮುರಿದಿದ್ದಾರೆ. 30ಕ್ಕೂ ಹೆಚ್ಚು ಚಿತ್ರಗಳಿಗೆ ಬಂಡವಾಳ ಹೂಡಿ ಒಂದಷ್ಟು ಚಿತ್ರಗಳು ಪಲ್ಟಿ ಹೊಡೆದಿದ್ದರೂ ಮಂಜಣ್ಣ ಮಾತ್ರ ಶೇಖ್ ಆಗಿಲ್ಲ.

    ತಾವು ರಾಜಕೀಯಕ್ಕೆ ಬರಲು ಬಲವಾದ ಕಾರಣ ಏನಾದರೂ ಇದೆಯೇ ಎಂದರೆ, ನನ್ನ ಆಸೆ ಬೇರೇನು ಇಲ್ಲ. ಜನಕ್ಕೆ ಒಳ್ಳೇದು ಮಾಡಬೇಕು. ನಾಗರೀಕರಿಗೆ ಸೇವೆ ಸಲ್ಲಿಸಬೇಕು ಎಂದಿದ್ದಾರೆ.

    ಸಿನಿಮಾದಲ್ಲಿದ್ದುಕೊಂಡೇ ಮಾಡಬಹುದಲ್ಲಣ್ಣ ಎಂದರೆ. ಉತ್ತಮ ಸಿನಿಮಾಗಳನ್ನು ನಿರ್ಮಿಸುತ್ತೇನೆ. ಜೊತೆಗೆ ರಾಜಕೀಯದಲ್ಲೂ ಉತ್ತಮ ಕೆಲಸ ಮಾಡುತ್ತೇನೆ ಎಂದಿದ್ದಾರೆ.

    ನಮ್ಮ ತಂದೆಯವರು ಒಣ ಕೊಬ್ಬರಿ ಮಾರಾಟ ಮಾಡುತ್ತಿದ್ದರು. ಹಾಗಾಗಿ ಚಿತ್ರರಂಗ ನನ್ನನ್ನು ಕೊಬ್ರಿ ಮಂಜು ಎಂದು ಪ್ರೀತಿಯಿಂದ ಕರೆಯುತ್ತಿದೆ. ಕೊಬ್ಬರಿ ಕೀಳುವುದರ ಜೊತೆ ಜೊತೆಗೆ ಕನ್ನಡ ಚಿತ್ರಗಳನ್ನು ನೋಡುತ್ತಿದೆ. 1997ರಲ್ಲಿ ರು.2 ಲಕ್ಷ ಬಂಡವಾಳ ಹೂಡಿ 'ಅನುರಾಗ ಸ್ಪಂದನ' ಎಂಬ ಚಿತ್ರ ನಿರ್ಮಿಸಿದೆ.

    ಅಲ್ಲಿಂದ ಶುರುವಾದ ನನ್ನ ಸಿನಿಮಾ ಪಯಣದಲ್ಲಿ ಇದುವರೆಗೂ 34 ಚಿತ್ರಗಳನ್ನು ನಿರ್ಮಿಸಿದ್ದೇನೆ. ಜ್ಯೋತಿಷ್ಯವನ್ನು ಬಲವಾಗಿ ನಂಬುವ ಮಂಜಣ್ಣನ ಭವಿಷ್ಯ ದೀಪಾವಳಿ ಹಬ್ಬದ ಬಳಿಕ ಬದಲಾಗಲಿದೆಯಂತೆ. ಇತ್ತೀಚೆಗೆ ತೆರೆಕಂಡ 'ಕಳ್ಳ ಮಳ್ಳ ಸುಳ್ಳ' ಚಿತ್ರ ಮಂಜಣ್ಣನ ಅಸಲಿಗೆ ಮೋಸ ಮಾಡಿಲ್ಲ. ಮಂಜಣ್ಣನಿಗೆ ನಾವು ನೀವು ಹೇಳಬೇಕಾದುದಿಷ್ಟೆ, ಗುಡ್ ಲಕ್... (ಒನ್‌ಇಂಡಿಯಾ ಕನ್ನಡ)

    English summary
    Kannada films producer K Manju breaks silence on politics. He wants to enter politics soon. Besides cinema producing he intend to do public service.
    Tuesday, October 18, 2011, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X