Just In
Don't Miss!
- News
ರೈತರ ಟ್ರಾಕ್ಟರ್ ಪಡೇರ್ ತಡೆಯಬೇಡಿ; ಪೊಲೀಸರಿಗೆ ಎಚ್ಚರಿಕೆ
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಂದ ಜೊತೆ ಜಾಲಿಡೇಸ್ ತೆರೆಗೆ ಸಿದ್ಧ
ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಶಿವರಾಜಕುಮಾರ್ ಅಭಿನಯದ 'ನಂದ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಮಾಹಿನ್ ಚಿತ್ರದ ಕತೆಗಾರರೂ ಕೂಡ. ಮಾಹಿನ್ ಅವರ ಜೀವನದಲ್ಲಿ ನಡೆದ ನೈಜಕತೆಗೆ ನಿರ್ದೇಶಕ ಅನಂತರಾಜು ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಶ್ವಿನಿ ಆಡಿಯೋ ಮೂಲಕ ಹಾಡಾಗಿ ಬಂದಿರುವ 'ನಂದ'ನಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ವದೇಶದಲ್ಲಲ್ಲದೆ ವಿದೇಶದಲ್ಲೂ ಚಿತ್ರೀಕರಣವಾಗಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕನ ಪಾತ್ರ ನಿರ್ವಹಿಸಿದರೆ ಕಾದಲ್ ಖ್ಯಾತಿಯ ಸಂಧ್ಯಾ ಹಾಗೂ ಮೈತ್ರೇಯಿ 'ನಂದ'ನ ನಾಯಕಿಯರಾಗಿದ್ದಾರೆ. ನಿರ್ಮಾಪಕ ಮಾಹಿನ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ರಮೇಶ್‌ಬಾಬು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತವಿದೆ, ಎಸ್.ಮನೋಹರ್ ಸಂಕಲನ, ಮಾಹಿನ್ ಕತೆ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ರಾಮು, ಗಂಡಸಿ ನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.
ಜಾಲಿಡೇಸ್
ಯಂಗ್ ಡ್ರೀಂಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ 'ಜಾಲಿಡೇಸ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಳೆ ಹೃದಯಗಳ ಮೋಜಿನ ದಿನಗಳು ಎಂ.ಡಿ.ಶ್ರೀಧರ್ ಅವರ ನಿರ್ದೇಶನದಲ್ಲಿ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ಮಾಪಕ ಮಾದಿರೆಡ್ಡಿ ಪರಮ್ ತಿಳಿಸಿದ್ದಾರೆ. ಮಿಕ್ಕಿ.ಜೆ.ಮಯೂರ್ ಅವರ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳು ಕೇಳುಗರ ಮನಸೂರೆಗೊಂಡಿದೆ. ಅತ್ಯುತ್ತಮ ಸ್ಥಳಗಳಲ್ಲಿ ಚಿತ್ರೀಕೃತವಾಗಿರುವ ಜಾಲಿಡೇಸ್ ಯುವ ಪೀಳಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಹಿಡಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಂ.ಡಿ.ಶ್ರೀಧರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಮಿಕ್ಕಿ ಜೆ ಮಯೂರ್ ಸಂಗೀತ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಕವಿರಾಜ್ ಗೀತರಚನೆ ಹಾಗೂ ರಂಗಸ್ವಾಮಿ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಶ್ವಾಸ್, ದೀಪು, ಪ್ರವೀಣ್, ನಿರಂಜನ್, ಐಶ್ವರ್ಯನಾಗ್, ಋತ್ವ, ಸ್ಪೂರ್ತಿ, ಕೀರ್ತಿ, ಋತಿಕಾ, ಸುಚೇಂದ್ರಪ್ರಸಾದ್, ಕಿಶೋರಿಬಲ್ಲಾಳ್, ಶ್ರೀರಾಘವ್ ಮುಂತಾದವರಿದ್ದಾರೆ.
(ದಟ್ಸ್ ಸಿನಿ ಸುದ್ದಿ)
ಗ್ಯಾಲರಿ:ಐಶ್ವರ್ಯನಾಗ್ || ಸಂಧ್ಯಾ || ಶಿವರಾಜಕುಮಾರ್