»   » ರಮ್ಯಾ-ಯಶ್ ಜೋಡಿಯ ಟ್ವಿಟ್ಟರ್ ಭಾರೀ ಗಲಾಟೆ

ರಮ್ಯಾ-ಯಶ್ ಜೋಡಿಯ ಟ್ವಿಟ್ಟರ್ ಭಾರೀ ಗಲಾಟೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂಗಳದಲ್ಲಿ ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿರುವ ನಟ, ನಟಿ ಎಂದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಲಕ್ಕಿ ಸ್ಟಾರ್ ರಮ್ಯಾ. ಅವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ. ಇಬ್ಬರೂ ಬಹಳಷ್ಟು ಕಿತ್ತಾಡುತ್ತಾರೆ. ಆದರೆ ನಂತರ ಏನೂ ಆಗೇ ಇಲ್ಲ ಎಂಬಂತೆ ವರ್ತಿಸುತ್ತಾರೆ ಎನ್ನುವ ಸಂದೇಶ ಸಿನಿಮಾಲೋಕದ ಕೇಂದ್ರ ಗಾಂಧಿನಗರದಿಂದ ಬಂದಿದೆ.

ಇಬ್ಬರೂ ವ್ಯಾಲೆಂಟೈನ್ಸ್ ಡೇಯಂದು ಖಾಸಗಿ ಚಾನಲ್ಲೊಂದರಲ್ಲಿ ಹರಟುತ್ತಿದ್ದರು, ಒಬ್ಬರನ್ನೊಬ್ಬರು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಆದರೆ ಅದಕ್ಕೂ ಮೊದಲು ಸ್ವಲ್ಪದಿನಗಳ ಹಿಂದೆ ಅವರಿಬ್ಬರೂ ಜಗಳವಾಡಿಕೊಂಡಿದ್ದರು. ಯಶ್ ಕುಚೇಷ್ಟೆಗಳ ಬಗ್ಗೆ ರಮ್ಯಾ ಕೋಪಗೊಂಡಿದ್ದರು. ಜಗಳದ ನಂತರ ರಮ್ಯಾ, ಯಶ್ ಕುರಿತು ದೂರಿ ಹೀಗೆ ಟ್ವೀಟ್ ಮಾಡಿದ್ದರು...

"ಗೌರವ ಮತ್ತು ಕೃತಜ್ಞತೆಯೇ ಇಲ್ಲದವರ ಸಂಗವನ್ನೇ ಮಾಡಬಾರದು, ಅಂತವರಿಗೆ ಸಹಾಯ ಮಾಡಲೇಬಾರದು. ಆ ವ್ಯಕ್ತಿಗಳು ತಮ್ಮ ಅಹಂ ಅನ್ನು ಬಿಡೋದಿಲ್ಲ, ಅದನ್ನೇ ಉಸಿರಾಡುತ್ತಿರುತ್ತಾರೆ. ನನಗಂತೂ ಇದರಿಂದ ಒಳ್ಳೆಯ ಪಾಠ ಸಿಕ್ಕಿದೆ. ಯಶ್ ಬಗ್ಗೆ ನಾನು ತಪ್ಪಾಗಿ ತಿಳಿದುಕೊಂಡಿದ್ದೆ" ಎಂದು ಟ್ವೀಟ್ಟರ್ ನಲ್ಲಿ ಬರೆದಿದ್ದರು ರಮ್ಯಾ.

ಆಶ್ಚರ್ಯವೆಂದರೆ ಅದೇ ರಮ್ಯಾ ಮಾರನೇ ದಿನ ಆ ಟ್ವಿಟ್ಟರ್ ಮೆಸೇಜನ್ನು ಡಿಲೀಟ್ ಮಾಡಿ, ಯಶ್ ಹೊಗಳಿ ಇನ್ನೊಂದು ಟ್ಟೀಟ್ ಹರಿಯಬಿಟ್ಟಿದ್ದಾರೆ. ಅದರಲ್ಲಿ ಯಶ್ ಬಹಳ ಒಳ್ಳೆಯ ಹುಡುಗ ಎಂದು ಬಹಳಷ್ಟು ಹೊಗಳಿದ್ದಾರೆ. ಲಕ್ಕಿ ಚಿತ್ರದಲ್ಲಿ ಮೊದಲ ಬಾರಿಗೆ ಜೋಡಿಯಾದ ಯಶ್-ರಮ್ಯಾ, ಚಿತ್ರ ಬಿಡುಗಡೆಯ ವೇಳೆಗೆ ಎಷ್ಟು ಬಾರಿ ಕಿತ್ತಾಡಿಕೊಂಡು ಅದೆಷ್ಟು ಬಾರಿ ತೇಪೆ ಹಚ್ಚಿಕೊಳ್ಳುತ್ತಾರೋ! (ಒನ್ ಇಂಡಿಯಾ ಕನ್ನಡ)

English summary
Between Rocking Star Yash and Sandalwood Queen Ramya, there is not everything well. This is spreading by Ramya's Twitter. 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X