»   » ದುರ್ಗಮ ಅರಣ್ಯದಲ್ಲಿ ಗಣೇಶ್ ಡ್ಯುಯೆಟ್

ದುರ್ಗಮ ಅರಣ್ಯದಲ್ಲಿ ಗಣೇಶ್ ಡ್ಯುಯೆಟ್

Posted By:
Subscribe to Filmibeat Kannada

ಅಂಧ್ರದ ತಿರುಪತಿ ಬಳಿಯ ದುರ್ಗಮ ಆರಣ್ಯಗಳಲ್ಲಿ ಒಂದಾದ ತಲಕೋಣ ಕಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗಾ ಶ್ರದ್ಧಾ ಆರ್ಯ ಡ್ಯುಯೆಟ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಲೋಕಷನ್ ಯಾರು ಹುಡುಕಿಕೊಟ್ರೋ ಅಂತೂ ಎಂಟು ದಿನ ಗಳ ಧೈರ್ಯವಾಗಿ ಚಿತ್ರೀಕರಣ ಮುಗಿಸಿ ಬರುವುದಾಗಿ ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಹೇಳುತ್ತಾರೆ.

ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆಗೆ ಸುನೀಲ್‌ಕುಮಾರ್‌ಸಿಂಗ್ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ರಚನೆ ಹೊಣೆ ಕೂಡ ಹೊತ್ತಿದ್ದಾರೆ. ರಾಮಾಯಣದಲ್ಲಿ ಜರುಗಿದ ಕೆಲವು ಪ್ರಸಂಗಗಳೇ ಚಿತ್ರದ ಕಥೆಗೆ ಸ್ಫೂರ್ತಿ ಎಂದ ನಿರ್ದೇಶಕರು ಚಿತ್ರ ಪೂರ್ತಿ 'ಮದುವೆಮನೆ'ಯ ಸಡಗರ ತುಂಬಿರುತ್ತದೆ ಎನ್ನುತ್ತಾರೆ.

'ಜುಗಾರಿಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ:ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ ಚಿತ್ರಕ್ಕಿದೆ.ಈ ಆಧುನಿಕ ರಾಮಾಯಣದ ಮದುವೆ ಮನೆ ಚಿತ್ರ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಕಳೆದ ವಾರ ಭರ್ಜರಿಯಾಗಿ ಆರಂಭಗೊಂಡಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada