»   » 'ರಾವಣ್' ಮಣಿರತ್ನಂ ಕೊನೆಯ ಚಿತ್ರವೇ?

'ರಾವಣ್' ಮಣಿರತ್ನಂ ಕೊನೆಯ ಚಿತ್ರವೇ?

Posted By:
Subscribe to Filmibeat Kannada

ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಚಿತ್ರ ನಿರ್ದೇಶಕರಲ್ಲೊಬ್ಬರಾದ ಮಣಿರತ್ನಂ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ? ಇಂದು ತೆರೆಕಂಡಿರುವ ಅವರ ಅಪೂರ್ವ ದೃಶ್ಯಕಾವ್ಯ 'ರಾವಣ್' ಮಣಿರತ್ನಂ ನಿರ್ದೇಶನದ ಕೊನೆಯ ಚಿತ್ರವಾಗಲಿದೆಯೇ? ಈ ಬಗ್ಗೆ ಮಣಿರತ್ನಂ 'ಪಲ್ಲವಿ ಅನುಪಲ್ಲವಿ' ಏನು?

'ರಾವಣ್' ಚಿತ್ರವನ್ನು ಕೈಗೆತ್ತಿಕೊಂಡಾಗ ಈ ಚಿತ್ರದ ಬಳಿಕ ನಿವೃತ್ತಿ ಘೋಷಿಸೋಣ ಎಂದುಕೊಂಡಿದ್ದೆ. ಕೋಡೈಕೆನಾಲ್ ಗೆ ಹೋಗಿ ಪ್ರತಿ ದಿನ ಗಾಲ್ಫ್ ಆಡುತ್ತಾ ನಿವೃತ್ತ ಜೀವನವನ್ನು ಕಳೆಯಬೇಕು ಎಂದು ಕನಸುಕಂಡಿದ್ದೆ. ಚಿತ್ರ ಮುಗಿಸಿದ ಬಳಿಕ ಇದೀಗ ಮತ್ತೊಂದು ಚಿತ್ರ ನಿರ್ದೇಶಿಸಬೇಕು ಎಂದು ಮನಸ್ಸು ಮಾಡಿದ್ದೇನೆ ಎಂದು ಮಣಿರತ್ನಂ ತಿಳಿಸಿದ್ದಾರೆ.

ತಮ್ಮ ಮುಂದಿನ ಚಿತ್ರದ ವಸ್ತು ಏನು ಎಂಬುದನ್ನು ಮಣಿರತ್ನಂ ಸ್ಪಷ್ಟಪಡಿಸಿಲ್ಲ. ನಿಜ ಹೇಳಬೇಕೆಂದರೆ ಕತೆಯ ಬಗ್ಗೆ ನನಗೇ ಏನು ಎತ್ತ ಎಂದು ಗೊತ್ತಾಗಿಲ್ಲ. ಆದರೆ ಶೀಘ್ರದಲ್ಲೇ ಆರಂಭಿಸುತ್ತೇನೆ. ಕಾದು ನೋಡೋಣ ಎಂದಿದ್ದಾರೆ. 'ರಾವಣ್' ಚಿತ್ರವನ್ನು ನಾನು ತುಂಬ ಮುತುವರ್ಜಿಯಿಂದ ನಿರ್ದೇಶಿಸಿದ್ದೇನೆ. ಚಿತ್ರದ ಫಲಾಫಲಗಳ ಬಗ್ಗೆ ಅಷ್ಟಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada