ಶ್ವಾನಕ್ಕೆ ವರವಾದ ಕಾಮೋತ್ತೇಜಕ ವಯಾಗ್ರ ಗುಳಿಗೆ
ಕೊನೆಯ ಶ್ವಾಸ ಬಿಡಬೇಕಾಗಿದ್ದ ಶ್ವಾನವೊಂದು ಕಾಮೋತ್ತೇಜಕ ವಯಾಗ್ರ ಗುಳಿಗೆ ತಿಂದು ಆಯಸ್ಸು ಗಟ್ಟಿ ಮಾಡಿಕೊಂಡಿದೆ. ಈ ವಿಚಿತ್ರ ಕತೆ ನ್ಯೂಯಾರ್ಕ್ ನ ಲಾಂಗ್ ದ್ವೀಪದಲ್ಲಿ ನಡೆದಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಈ ಶ್ವಾನಕ್ಕೆ ವಯಾಗ್ರ ಗುಳಿಗೆಗಳು ವರವಾಗಿ ಪರಿಣಮಿಸಿವೆ. ಸುದ್ದಿ ರೋಚಕವಾಗಿರುವ ಕಾರಣ ಮನರಂಜನಾ ಉದ್ದೇಶದಿಂದ ಈ ವಿಭಾಗದಲ್ಲಿ ಪ್ರಕಟಿಸಲಾಗಿದೆ.
| ಈ ಶ್ವಾನಕ್ಕೆ ವಯಾಗ್ರ ಗುಳಿಗೆ ಕೊಡದೆ ಹೋದರೆ ಹೃದಯಾಘಾತದಿಂದ ಸಾವಪ್ಪುತ್ತದೆ. | |
"ವಯಾಗ್ರ ಬಯಸುತ್ತಿರುವ ಏಕೈಕ ಶ್ವಾನ ಇದಾಗಿದೆ. ಈ ಹಿಂದೆ ನಾನೆಲ್ಲೂ ಈ ರೀತಿಯ ಶ್ವಾನವನ್ನು ನೋಡಿಲ್ಲ. ಈ ಶ್ವಾನಕ್ಕೆ ವಯಾಗ್ರ ಗುಳಿಗೆ ಕೊಡದೆ ಹೋದರೆ ಹೃದಯಾಘಾತದಿಂದ ಸಾವಪ್ಪುತ್ತದೆ" ಎಂದು ಪ್ರಾಣಿ ದಯಾ ಸಂಘದ ವಕ್ತಾರರು ತಿಳಿಸಿದ್ದಾರೆ. ಈ ಶ್ವಾನದ ಜೀವ ಕಾಪಾಡಲು ಬಹಳಷ್ಟು ಮುಂದೆ ಬಂದಿದ್ದು ವಯಾಗ್ರ ಕೊಳ್ಳಲು ಧನ ಸಹಾಯ ಮಾಡುತ್ತಿದ್ದಾರೆ.
ಅಂದಹಾಗೆ ಈ ಹೆಣ್ಣು ಶ್ವಾನದ ಹೆಸರು Ingrid.ವಯಾಗ್ರ ಚಿಕಿತ್ಸೆ ಮುಂದುವರಿಸಿದಷ್ಟು ಸಮಯ ಇನ್ ಗ್ರಿಡ್ ಗೆ ಯಾವುದೇ ಪ್ರಾಣಾಪಾಯವಿಲ್ಲ.ವಯಾಗ್ರ ತೆಗೆದುಕೊಳ್ಳುತ್ತಿದ್ದರೂ ಗಂಡು ನಾಯಿಯೊಂದಿಗೆ ಸರಸವಾಡುವಂತಿಲ್ಲ. ಒಟ್ಟಿನಲ್ಲಿ ಶ್ವಾನ ಪ್ರಿಯರ ಹೃದಯ ಗೆದ್ದಿರುವ ಈ ಶುನಕ ವಯಾಗ್ರ ತಿಂದು ಜೀವ ಭದ್ರ ಮಾಡಿಕೊಂಡಿರುವ ಸುದ್ದಿಯನ್ನು ನ್ಯೂಯಾರ್ಕ್ ಡೈಲಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ.


Click it and Unblock the Notifications











