For Quick Alerts
  ALLOW NOTIFICATIONS  
  For Daily Alerts

  ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ

  By Rajendra
  |

  ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರ 12 ಭಾಷೆಗಳಿಗೆ ಡಬ್ ಆಗಲಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಗೌಡ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಕಪ್ಪು ಬಿಳುಪಿನಿಂದ ಬಣ್ಣದ ಚಿತ್ರವಾಗಿ ಪರಿವರ್ತಿಸಿದ್ದರು. ಇದಕ್ಕಾಗಿ ರು. 3 ಕೋಟಿ ಖರ್ಚು ಮಾಡಿದ್ದರು.

  ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಹಿಂದಿ ಭಾಷೆಗೆ ಡಬ್ ಆಗಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.ಸತ್ಯಹರಿಶ್ಚಂದ್ರದಂತಹ ಅಪರೂಪದ ಚಿತ್ರ ಬೇರೆ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎಂಬುದು ಕೆಸಿಎನ್ ಅವರ ಉದ್ದೇಶ. 'ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದಲ್ಲಿ ತರುವ ಯೋಚನೆ ಕೆಸಿಎನ್ ಗೌಡರಿಗಿದೆ.

  1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ.ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಕಳಕಳಿ ಗೌಡರದ್ದು.

  ಈ ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.

  Tuesday, May 18, 2010, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X