»   » ತಿಂಗಳ ಕೊನೆಗೆ ರಮೇಶ್ ಅರವಿಂದ್ 'ಶಾಕ್'

ತಿಂಗಳ ಕೊನೆಗೆ ರಮೇಶ್ ಅರವಿಂದ್ 'ಶಾಕ್'

Posted By:
Subscribe to Filmibeat Kannada

ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿರುವ 'ಶಾಕ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಇದೇ ಅಕ್ಟೋಬರ್ 29ರಂದು ತೆರೆಗೆ ಬರಲಿದೆ. ಅರಸಿಕೆರೆಯ ಒಂದೇ ಮನೆಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ರಮೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಿರ್ದೆಶಕರು ಹ.ಸೂ ರಾಜಶೇಖರ್. ಸುಮಾಗುವಾ ನಾಯಕಿಯಾಗಿರುವ 'ಶಾಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ ಇದ್ದಾರೆ. ಶ್ರೀಸಂಕೇಶ್ವರ ಫಿಲಂಸ್ ಲಾಂಛನದಲ್ಲಿ ಅಮರಚಂದ್ ಜೈನ್, ವಿಜಯ್ ಸುರಾನಾ, ಮಂಗೀಲಾಲ್ ಜೈನ್ ಮತ್ತು ರಮೇಶ್ ರವರು ನಿರ್ಮಿಸಿರುವ ಚಿತ್ರವಿದು.

ಚಿತ್ರಕ್ಕೆ ಚಿತ್ರಕಥೆ, ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ನಿರಂಜನಬಾಬು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಜಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X