ನನ್ನ ಮೊದಲ ಹೆಜ್ಜೆಯ ಗುರುತು ಸೂರ್ಯಾಸ್ತ

ಆದರೂ ಮನಸ್ಸಿನಲ್ಲಿ ಏನಾದ್ರೂ ಮಾಡಿ ತೋರಿಸಬೇಕೆಂಬ ತುಡಿತ ಮಾತ್ರ ಬಲವಾಗಿ ಕಾಡುತ್ತಲೇ ಇತ್ತು. ಹೊಸದರೆಡೆಗೆ ನೋಡುವ ಮನಸ್ತತ್ವದ ನಾನು ಕೊನೆಗೆ ಸಿದ್ದ ಮಾಡಿಕೊಂಡ ಕತೆಯೇ ಈ 'ಸೂರ್ಯಾಸ್ತ.' ಹಾಗಂತ ಇದು ಯಾವುದೇ ಕಮರ್ಷಿಯಲ್ ಸಿನಿಮಾ ಅಲ್ಲ. ಬದಲಾಗಿ ಇದೊಂದು ಕಲಾತ್ಮಕ ಸಿನಿಮಾ (ಕಿರುಚಿತ್ರ). ಇದು ಕೇವಲ ಎರೆಡೇ ಎರಡು ಅಪರಿಚಿತ ಪಾತ್ರಗಳ ಮಧ್ಯೆ ಒಂದು ಸೂರ್ಯಾಸ್ತದ ಸಮಯದಲ್ಲಿ ನಡೆಯುವ ಕತೆ. ಸಾಧಾರಣವಾಗಿ ಕಿರುಚಿತ್ರಗಳೆಂದರೆ ಸಾಮಾನ್ಯ ಪ್ರೇಕ್ಷಕನಿಗೆ ಜೀರ್ಣಕೊಳ್ಳಲು ಕಷ್ಟವೆಂಬ ವಾದ ಕೂಡ ಇದೆ. ಅದು ಎಷ್ಟರ ಮಟ್ಟಿಗೆ ಸರಿಯೋ ನನಗೆ ಗೊತ್ತಿಲ್ಲ. ನನ್ನ ಉದ್ದೇಶ ನಾನು ನನ್ನ ಚಿತ್ರದ ಮೂಲಕ ಆಸಿಡ್‌ದಾಳಿ, ಏಡ್ಸ್, ಸನಾತನ ಧರ್ಮದಲ್ಲಿನ ಮೌಲ್ಯಗಳು; ಈ ಮೂರು ವಿಚಾರಗಳನ್ನು ಒಂದೆ ಕಥಾವಸ್ತುವಿನ ಮೂಲಕ ಹೊರತರಲು ಯತ್ನಿಸುತ್ತಿದ್ದೇನೆ.
ಇಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆಯ ಜೊತೆಗೆ ಆ ಕುಟುಂಬಗಳ ಮೇಲೆ ಈ ದಾಳಿಯ ನಂತರ ಉಂಟಾಗುವ ತಲ್ಲಣಗಳೇ ಇಲ್ಲಿ ನಿರೂಪಣೆಗೆ ಆಯ್ಕೆ ಮಾಡಿಕೊಂಡಿರುವ ವಿಷಯ. ದಾಳಿಯ ನಂತರದ ದಿನಗಳಲ್ಲಿ ಆ ಕುಟುಂಬ ದಾಳಿಗೊಳದವರ ಬಗ್ಗೆ ತೋರಿಸಬೇಕಾದ ಕಾಳಜಿ, ಪದೇ ಪದೇ ಚಿಕ್ಸತೆಗಾಗಿ ನೀರಿನಂತೆ ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ. ಇದರ ಜತೆಗೆ ನಿರಂತರವಾಗಿ ಕೋರ್ಟ್‌ಗಳಿಗೆ ಅಲೆಯಬೇಕಾದ ಒತ್ತಡದಲ್ಲಿ ದಾಳಿಗೊಳದವರ ಯಾತನೆ ಇದೇ ಅಂಶಗಳನ್ನು ನಾನು ಪ್ರಮುಖವಾಗಿ ಪ್ರಸ್ತಾಪಿಸಲು ಯತ್ನಿಸುತ್ತಿದ್ದೇನೆ. ಇದೇ ಸಮಯದಲ್ಲಿ ನನಗೆ ಆಸಿಡ್ ದಾಳಿಗೊಳಗಾದವರ ಕುರೂಪತೆಯನ್ನು ತೋರಿಸಿ ಪ್ರೇಕ್ಷಕರನ್ನು ಮೆಚ್ಚಿಸುವ ಇಚ್ಛೆಯಿಲ್ಲ. ಹೀಗಾಗಿ ಅವರ ಧ್ವನಿಯಾಗಿ ಒಂದು ಪಾತ್ರ ಎಲ್ಲವನ್ನು ಇಲ್ಲಿ ಹೇಳುತ್ತದೆ. ಸರಳವಾದ ಶೈಲಿ ತುಸು ಮನೋರಂಜನೆಯನ್ನು ಕೂಡ ಸೇರಿಸಿ (ಹಾಗಂತ ಅಶ್ಲೀಲತೆಯಲ್ಲ) ಸರಳವಾದ ಚಿತ್ರಕತೆಯ ಮೂಲಕ ಶ್ರೀಸಾಮಾನ್ಯನ ಮುಂದೆ ಸಮಾಜಮುಖಿಯಾದ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನಕ್ಕೆ ಕೈಹಾಕಿದ್ದೇನೆ.

ಇದೂ ಓದಿ


Click it and Unblock the Notifications











