»   » ವಿಷಮ ಸ್ಥಿತಿಯಲ್ಲಿ ಗಾಯಕ ಸಿ. ಅಶ್ವತ್ಥ್

ವಿಷಮ ಸ್ಥಿತಿಯಲ್ಲಿ ಗಾಯಕ ಸಿ. ಅಶ್ವತ್ಥ್

Subscribe to Filmibeat Kannada
C Ashwath is critical, Admitted to Columbia Asia
ಕನ್ನಡ ಸುಗಮ ಸಂಗೀತದ ಗಾರುಡಿಗ ಸಿ. ಅಶ್ವತ್ಥ್ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಅಶ್ವತ್ಥ್ ಅವರನ್ನು ಇಡಲಾಗಿದೆ. ಅಶ್ವತ್ಥ್ ಅವರು ಕೆಲದಿನಗಳಿಂದ ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದರು.

ಗುರುವಾರ ಬೆಳಗ್ಗೆಯ ತನಕ ಆರೋಗ್ಯವಾಗಿಯೇ ಇದ್ದ ಅಶ್ವತ್ಥ್ ಅವರಿಗೆ ಮಧ್ಯಾಹ್ನ ಇದ್ದಕ್ಕಿಂದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಹೊಟ್ಟೆ ನೋವು ಹೆಚ್ಚಾದ ಕಾರಣ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಧ್ಯರಾತ್ರಿವರೆಗೂ ಅಶ್ವತ್ಥ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮೂಲಗಳು ತಿಳಿಸಿವೆ.

ಪಿತ್ತಕೋಶದ ತೊಂದರೆಯಿಂದಾಗಿ ಒಂದು ವಾರದ ಹಿಂದಷ್ಟೇ ಇದೇ ಆಸ್ಪತ್ರೆಯಲ್ಲಿ ಅಶ್ವತ್ಥ್ ಚಿಕಿತ್ಸೆ ಪಡೆದಿದ್ದರು. ತೀವ್ರ ನಿಗಾ ಘಟಕದಲ್ಲಿರುವ ಅವರನ್ನು ನಾಲ್ವರು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇದೇ ಡಿ.29ಕ್ಕೆ ಅಶ್ವಥ್ ಅವರು 70ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ.

ಅವರ ಜನುಮದಿನವನ್ನು ಅದ್ದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಲು ನಿರ್ಧರಿಸಿದ್ದಾರೆ. ಡಿ.29ರಂದು ಸುತ್ತೂರು ಶ್ರೀಗಳು ಹಾಗೂ ವೀರೇಂದ್ರ ಹೆಗ್ಗಡೆ ಅವರಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಮ್ಮ ಹುಟ್ಟುಹಬ್ಬದ ದಿನ ಸ್ವತಃ ಅಶ್ವತ್ಥ್ ಅವರೇ ಹಾಡಲಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada